Sunday, May 29, 2022

ಕಾನೂನು ವಿವಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.25 ಮೀಸಲು ಕಾಯ್ದೆ ರದ್ದು

Follow Us

newsics.com
ಬೆಂಗಳೂರು: ಸ್ಥಳೀಯರಿಗೆ ಶೇ.25 ಮೀಸಲಾತಿ ನೀಡುವ ರಾಷ್ಟ್ರೀಯ ಕಾನೂನು ಶಾಲೆ ತಿದ್ದುಪಡಿ ಕಾಯಿದೆಯನ್ನು ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ(NLSIU)ಯಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಲು ಕರ್ನಾಟಕ ಸರ್ಕಾರ ವಿಧೇಯಕ ಜಾರಿಗೆ ತಂದಿತ್ತು. ರಾಜ್ಯದ ಸ್ಥಳೀಯ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಶೇ 25ರಷ್ಟು ಮೀಸಲಾತಿ ಕಲ್ಪಿಸುವ 2020ರ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಲಾಗಿತ್ತು.
ಸಿಎಲ್‌ಎಟಿ ಆಕಾಂಕ್ಷಿ 17 ವರ್ಷದ ಬಾಲಚಂದರ್ ಕೃಷ್ಣನ್ ಅರ್ಜಿ ಸಲ್ಲಿಸಿ, ಎನ್‌ಎಲ್‌ಎಸ್‌ಐಯುನಲ್ಲಿ ಸೀಟು ಪಡೆಯಲು ಮೀಸಲಾಯಿ ಕಾಯಿದೆ ಅಡ್ಡಿಯಾಗಲಿದೆ ಎಂದು ಮನವಿ ಸಲ್ಲಿಸಿದ್ದರು. ವಕೀಲ ಸಿ ಕೆ ನಂದಕುಮಾರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಅರ್ಜಿ ಸಲ್ಲಿಸಿತ್ತು.
ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಬಿ ವಿ ನಾಗರತ್ನ ಮತ್ತು ನ್ಯಾ. ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಬಳಿಕ ಸ್ಮರಣ ಶಕ್ತಿಯನ್ನೇ ಕಳೆದು ಕೊಂಡ ಪತಿ!

newsics.com ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯು ನೆನಪಿನ ಶಕ್ತಿ ಕಳೆದುಕೊಂಡ ವಿಚಿತ್ರ ಘಟನೆಯು ಐರಿಷ್ ನಲ್ಲಿ ನಡೆದಿದೆ. ಇದೊಂದು ಅಲ್ಪಾವಧಿ ಸ್ಮರಣ ಶಕ್ತಿ...

ತನ್ನ ಆಯಸ್ಸಿನ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದೆ ಈ ಶ್ವಾನ!

newsics.com ಶ್ವಾನಗಳು ಅಬ್ಬಬ್ಬಾ ಅಂದ್ರೆ 8- 10 ವರ್ಷ ಬದುಕುತ್ತದೆ. ಕೆಲವೊಂದು ನಾಯಿಗಳು 15 ವರ್ಷಗಳ ಕಾಲ ಬದುಕಿದ ಇತಿಹಾಸ ಕೂಡ ಇದೆ. ಆದರೆ ಪೆಬ್ಲಸ್ ಹೆಸರಿನ ಟಾಯ್ ಫ್ಯಾಕ್ಸ್ ಟೆರಿಯರ್ ಜಾತಿಗೆ ಸೇರಿದ ನಾಯಿಯೊಂದು...

ಮಹಾರಾಷ್ಟ್ರದ ನಾಲ್ವರಲ್ಲಿ ಒಮೈಕ್ರಾನ್ ಉಪತಳಿ ಪತ್ತೆ 

newsics.com ಮಹಾರಾಷ್ಟ್ರ: ಒಮೈಕ್ರಾನ್ ಉಪತಳಿ BA 4 ಮತ್ತು BA 5 ಸೋಂಕು ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ನಾಲ್ವರಲ್ಲಿ ಪತ್ತೆಯಾಗಿದೆ.ಸೋಂಕಿತರೆಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಣೆಯಿಂದ ಬಂದಿದ್ದ ಏಳು ರೋಗಿಗಳಲ್ಲಿ ಒಮೈಕ್ರಾನ್ ಉಪತಳಿಗಳ ಸೋಂಕು...
- Advertisement -
error: Content is protected !!