Wednesday, July 6, 2022

ವೈದ್ಯಳಾಗುವ ಆಕೆಯ ಕನಸಿಗೆ ಕುತ್ತಾಯ್ತು ಕ್ಯಾನ್ಸರ್, ಕೊರೋನಾ

Follow Us

♦ ಪಿಯು ಫಲಿತಾಂಶ ತಿಳಿಯಲು ಈಗ ಆಕೆಯೇ ಇಲ್ಲ

ದಾವಣಗೆರೆ: ವಿಧಿ ವಿಪರ್ಯಾಸ ಅಂದರೆ ಇದೇ ಇರಬೇಕು. ಆಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಐದು ವಿಷಯಗಳಿಗೆ ಹಾಜರಾಗಿದ್ದಳು, ಈಗ ಫಲಿತಾಂಶ ಬಂದಿದ್ದು, 5 ವಿಷಯಗಳಲ್ಲಿ ಆಕೆ ಗಳಿಸಿದ್ದು ಶೇ 93.4.
ಫಲಿತಾಂಶದಲ್ಲಿ ಅತ್ಯುತ್ತಮ‌ ಸಾಧನೆ ಮಾಡಿದ್ದರೂ ಸಂಭ್ರಮಿಸಲು ಅವಳೇ ಇಲ್ಲದಂತಾಗಿದೆ. ಪಿಯುಸಿಯ ಕೊನೆಯ ಪರೀಕ್ಷೆಯ ಹಿಂದಿನ ದಿನ ಅಂದರೆ ಜೂನ್ 17ರಂದು ಸಾವನ್ನಪ್ಪಿದ್ದಳು.
ಇದು ಕ್ಯಾನ್ಸರ್’ಗೆ ಬಲಿಯಾದ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಅನುಷಾಳ ಕರುಣಾಜನಕ ಕಥೆ.
ಈಕೆ ಚನ್ನಗಿರಿ ತಾಲೂಕಿನ ತಾಳಿಕಟ್ಟೆಯ ಬಸವರಾಜಪ್ಪ ಮತ್ತು ಮಂಜಮ್ಮ ಎಂಬ ಕೃಷಿಕ ದಂಪತಿಯ ಮೂವರು ಹೆಣ್ಣುಮಕ್ಕಳಲ್ಲಿ ಅನುಷಾ ದೊಡ್ಡವಳು. ದಾವಣಗೆರೆಯ ಸಿದ್ದಗಂಗಾ ಕಾಲೇಜಿನ ಹಾಸ್ಟೆಲ್’ನಲ್ಲಿದ್ದು ಓದುತ್ತಿದ್ದಳು, ಮಾರ್ಚ್’ನಲ್ಲಿ ಪಿಯು ಪರೀಕ್ಷೆ ಎಲ್ಲರಂತೆ ಬರೆದಿದ್ದಳು. ಅಷ್ಟೊತ್ತಿಗೆ ಲಾಕ್ ಡೌನ್’ನಿಂದ ಇಂಗ್ಲಿಷ್ ಪತ್ರಿಕೆ ಮುಂದೂಡಲಾಯಿತು. ಅನುಷಾ ಕೂಡಾ ತಮ್ಮ ಮನೆಗೆ ತೆರಳಿದ್ದಳು. ಮೇನಲ್ಲಿ ಆಕೆಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಗ ಈಕೆಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಿಕಿತ್ಸೆ ಆರಂಭವಾಯಿತು. ಜೂನ್ 18 ರಂದು ಪರೀಕ್ಷೆ ಬರೆಯಲು ಸಿದ್ಧಳಾಗಿದ್ದಳು. ಆದರೆ, ಜೂನ್ 17ರಂದು ಅನುಷಾಳ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಳು.
ಈಗ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಗಣಿತದಲ್ಲಿ 100, ಕನ್ನಡದಲ್ಲಿ 92, ಭೌತಶಾಸ್ತ್ರದಲ್ಲಿ 91, ರಸಾಯನಶಾಸ್ತ್ರದಲ್ಲಿ 98, ಜೀವಶಾಸ್ತ್ರದಲ್ಲಿ 95 ಅಂಕಗಳನ್ನ ಗಳಿಸಿದ್ದಾಳೆ. 10 ನೇ ತರಗತಿಯಲ್ಲಿ 604 ಅಂಕ ಗಳಿಸಿದ್ದಳು. ಆದರೆ, ವೈದ್ಯಳಾಗುವ ಈಕೆಯ ಕನಸು ನನಸಾಗಲೇ ಇಲ್ಲ.
ಈಕೆಯ ಬಾಳಲ್ಲಿ ಕ್ಯಾನ್ಸರ್ ಅಷ್ಟೇ ಅಲ್ಲ, ಕೊರೋನಾ ಕೂಡ ಆಟ ಆಡಿದೆ. ಮೇ 13ಕ್ಕೆ ತಲೆನೋವು, ಹೊಟ್ಟೆನೋವು ಎಂದು ಹೇಳಿದ್ದಕ್ಕೆ ಶಿವಮೊಗ್ಗ ಆಸ್ಪತ್ರೆ ಹಾಗೂ ಮಣಿಪಾಲ ಆಸ್ಪತ್ರೆಗಳಲ್ಲಿ ತೋರಿಸಿದ್ದೆವು. ಶಿವಮೊಗ್ಗದಲ್ಲಿ ಕೊರೋನಾ ಟೆಸ್ಟ್ ಮಾಡಿಸಿದ್ದಾಗ ನೆಗೆಟಿವ್ ಬಂದಿತ್ತು. ನಂತರ ಮಣಿಪಾಲ್’ನಲ್ಲಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಎರಡು ದಿನಗಳ ಬಳಿಕ ಮತ್ತೆ ಟೆಸ್ಟ್ ಮಾಡಿಸಿದಾಗ ಮತ್ತೆ ನೆಗೆಟಿವ್ ಬಂದಿತ್ತು ಎನ್ನುತ್ತಾರೆ, ಅನುಷಾ ತಾಯಿ.

ಮತ್ತಷ್ಟು ಸುದ್ದಿಗಳು

vertical

Latest News

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...

ಗೃಹ ಬಳಕೆ ಸಿಲಿಂಡರ್ ದರ ಮತ್ತೆ 50 ರೂಪಾಯಿ ಹೆಚ್ಚಳ

newsics.com ನವದೆಹಲಿ: ತೈಲ ಸಂಸ್ಥೆಗಳು ಎಲ್ ಪಿ ಜಿ ಬಳಕೆದಾರರಿಗೆ ಶಾಕ್ ನೀಡಿವೆ. ಗೃಹ ಬಳಕೆಯ ಸಿಲಿಂಡರ್ ದರ ಮತ್ತೆ ಹೆಚ್ಚಳ ಮಾಡಲಾಗಿದೆ. ಪ್ರತಿ ಸಿಲಿಂಡರ್ ದರ 50 ರೂಪಾಯಿ ಹೆಚ್ಚಿಸಲಾಗಿದೆ.  ನೂತನ ದರ...
- Advertisement -
error: Content is protected !!