newsics.com
ಮೈಸೂರು: ವೇಗವಾಗಿ ಚಲಿಸುತ್ತಿದ್ದ ಕಾರಿನ ಚಕ್ರ ಸಿಡಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ದೈವಿಕ್ (12) ಮತ್ತು ಗುಣಲಕ್ಷ್ಮೀ (35) ಎಂದು ಗುರುತಿಸಲಾಗಿದೆ. ಗುಣಲಕ್ಷ್ಮೀ ಅವರ ಪತಿ ಜಗದೀಶ್ ಕಾರು ಚಲಾಯಿಸುತ್ತಿದ್ದರು.
ಮೈಸೂರು ಸಮೀಪದ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಈ ದುರಂತ ನಡೆದಿದೆ. ಜಗದೀಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.