newsics.com
ಮಂಡ್ಯ: ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ ಆರೋಪವನ್ನು ಎದುರಿಸುತ್ತಿರುವ ಹಿರಿಯ ನಟ ಜೈ ಜಗದೀಶ್ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಜೂನ್ 5ರಂದು ನಡೆದ ಘಟನೆ ಇದಾಗಿದ್ದು ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಜಯರಾಮೇಗೌಡ ಎಂಬವರು ಬಸ್ನಿಂದ ಕೆಳಗಿಳಿದಿದ್ದರು. ಕಾರಿನಲ್ಲಿ ಬಂದ ಜೈ ಜಗದೀಶ್ ಸೇರಿದಂತೆ ಹಲವರು ಜಯರಾಮೇಗೌಡನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದೇ ಘಟನೆ ಸಂಬಂಧ ಇದೀಗ ಪ್ರಕರಣ ದಾಖಲಾಗಿದೆ.