newsics.com
ಬೆಳಗಾವಿ: ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಜಿಎಸ್ಟಿ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ನಗರದಲ್ಲಿ ಶನಿವಾರ ಮಿಂಚಿನ ದಾಳಿ ನಡೆಸಿದ ಸಿಬಿ ಅಧಿಕಾರಿಗಳು, ಬೆಳಗಾವಿಯ ಜಿಎಸ್ಟಿ ಅಧೀಕ್ಷಕ ಜಡಗಿ, ಜಿಎಸ್ಟಿ ಇನ್ಸ್ ಪೆಕ್ಟರ್ ಗಳಾದ ವೈಭವ್ ಗೋಯಲ್, ಮೋಹನ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ಈ ಮೂವರು ಜಿಎಸ್ ಟಿ ಅಧಿಕಾರಿಗಳು ಚಿಕ್ಕೋಡಿ ತಾಲೂಕಿನ ಬೋರಗಾಂವ ಗ್ರಾಮದ ಆರ್ ಪಿ ಪ್ರೊಡಕ್ಷನ್ ಹೆಸರಿನಲ್ಲಿ ಫ್ಯಾಕ್ಟರಿ ನಡೆಸುತ್ತಿದ್ದಂತ ಮಾಲೀಕ ರಾಜಾ ಲಕ್ಷ್ಮಣ್ ಪಾಚಾಪುರೆ ಅವರಿಂದ 20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇಂದು 20 ಲಕ್ಷ ಹಣದಲ್ಲಿ 5 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಡ್ ಆಗಿ ಸಿಬಿಐ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವೇಳೆಯಲ್ಲಿಯೇ ಮೂವರು ಜಿಎಸ್ ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.30ರವರೆಗೆ ಮೂವರು ಆರೋಪಿಗಳನ್ನು ಕೋರ್ಟ್ ನ್ಯಾಯಾಂಗ ವಶಕ್ಕೆ ನೀಡಿದೆ.
ಲಂಚ ಪಡೆಯುತ್ತಿದ್ದ 3 ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಿದ ಸಿಬಿಐ
Follow Us