ಬೆಂಗಳೂರು: ಮಾದಕ ದ್ರವ್ಯ ಜಾಲದ ಜತೆ ಸಂಬಂಧ ಹೊಂದಿರುವ ಆರೋಪಕ್ಕೆ ಗುರಿಯಾಗಿರುನ ಆದಿತ್ಯ ಆಳ್ವಾ ಸಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂಜುಮಾಲಾ ನಾಯಕ್ ಮತ್ತು ಪುನೀತ್ ಅವರನ್ನೊಳಗೊಂಡ ಸಿಸಿಬಿ ಅಧಿಕಾರಿಗಳ ತಂಡ ಮುಂಜಾನೆ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದೆ.
ಹೆಬ್ಬಾಳ ಬಳಿ ಇರುವ ಆದಿತ್ಯ ಆಳ್ವಾ ನಿವಾಸದಲ್ಲಿ ಇದೀಗ ಯಾರೂ ಇಲ್ಲ. ಈ ಐಷರಾಮಿ ಮನೆಯಲ್ಲಿ ಆದಿತ್ಯ ಆಳ್ವಾ ತಮ್ಮ ಸ್ನೇಹಿತರ ಜತೆ ಪಾರ್ಟಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆದಿತ್ಯಾ ಆಳ್ವಾ ಆರನೇ ಆರೋಪಿಯಾಗಿದ್ದಾನೆ.
ಆದಿತ್ಯ ಆಳ್ವಾ ಮುಂಬೈನಲ್ಲಿ ಸ್ನೇಹಿತರ ಬಳಗಹೊಂದಿದ್ದು ಅಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಯಿದೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದಿತ್ಯ ಆಳ್ವಾ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯವನಾಗಿದ್ದಾನೆ. ಜೀವರಾಜ್ ಆಳ್ವಾ ಮತ್ತು ನಂದಿನಿ ಆಳ್ವಾ ಅವರ ಪುತ್ರನಾಗಿರುವ ಆದಿತ್ಯ ಚಿಕ್ಕಂದಿನಿಂದಲೇ ಹಾದಿ ತಪ್ಪಿದ್ದಾನೆ ಎಂದು ವರದಿಯಾಗಿದೆ.