newsics.com
ಮಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ನಟಿ, ಆಯಂಕರ್ ಅನುಶ್ರೀ ಇಂದು (ಸೆ.25) ಸಿಸಿಬಿ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆ ಮಂಗಳೂರು ಸಿಸಿಬಿ ಅಧಿಕಾರಿಗಳು ಅನುಶ್ರೀ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ನಾಳೆ 11 ಗಂಟೆಗೆ ಪಾಂಡೇಶ್ವರ ನಾರ್ಕೋಟಿಕ್ ಅಂಡ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯಲಿದೆ, ತಪ್ಪದೇ ವಿಚಾರಣೆಗೆ ಹಾಜರಾಗಬೇಕು ಎಂದು ಅನುಶ್ರೀಗೆ ಸಿಸಿಬಿ ವಾರ್ನಿಂಗ್ ನೀಡಿದೆ. ಮಂಗಳೂರಿನ ತನ್ನ ಮನೆಯಲ್ಲಿ ಅನುಶ್ರೀ ತಂಗಿದ್ದು, ನಾಳೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಅನುಶ್ರೀಗೆ ಸಿಸಿಬಿ ಎಚ್ಚರಿಕೆ, ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ
Follow Us