newsics.com
ಹುಬ್ಬಳ್ಳಿ: ಅತ್ಯಂತ ಆಪ್ತರಾಗಿರುವವರ ಹೆಸರಿನಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಬೇನಾಮಿ ಆಸ್ತಿ ಹೊಂದಿದ್ದರೇ. ಇದೀಗ ಇಂತಹ ಪ್ರಶ್ನೆ ಉದ್ಭವಿಸಿದೆ. ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೇರಿದಂತೆ ಹಲವೆಡೆ ಚಂದ್ರಶೇಖರ್ ಗುರೂಜಿ ಆಸ್ತಿ ಹೊಂದಿದ್ದಾರೆ.
ಸರಳ ವಾಸ್ತು ಜನಪ್ರಿಯತೆ ಪಡೆಯುತ್ತಾ ಹೋದಂತೆ ಅವರ ಸಂಪತ್ತು ಹೆಚ್ಚಾಗಿತ್ತು. ಆದಾಯ ತೆರಿಗೆ ಸೇರಿದಂತೆ ಇತರ ಇಲಾಖೆಗಳ ಕಿರಿ ಕಿರಿ ತಪ್ಪಿಸಲು ಚಂದ್ರಶೇಖರ್ ಗುರೂಜಿ ತಮ್ಮ ನಂಬಿಕಸ್ಥರ ಹೆಸರಿನಲ್ಲಿ ಕೆಲವು ಆಸ್ತಿ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.
ಇದೇ ವೇಳೆ ನೋಟ್ ಬ್ಯಾನ್ ಮಾಡಿದ ಬಳಿಕ ತಲೆದೋರಿದ ಆರ್ಥಿಕ ಬಿಕ್ಕಟ್ಟಿನ ಕಾರಣ ಕೆಲವರ ಬಳಿ ಆಸ್ತಿ ಹಿಂತಿರುಗಿಸಲು ಕೂಡ ಚಂದ್ರ ಶೇಖರ್ ಗುರೂಜಿ ಸೂಚಿಸಿದ್ದರು ಎಂದು ಕೂಡ ವರದಿಯಾಗಿದೆ.
ಇದೀಗ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗುತ್ತಿದ್ದು ಸತ್ಯಾಂಶ ಹೊರ ಬರಲಿದೆ
ರಾಜ್ಯದಲ್ಲಿ ಮಳೆಯ ಅಬ್ಬರ, ಚಿಕ್ಕಮಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ