newsics.com
ಹುಬ್ಬಳ್ಳಿ : ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿದವರು ಅವರ ಆಪ್ತರೇ ಎಂಬ ಮಾಹಿತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಗುರೂಜಿ ಕೊಲೆ ಬಳಿಕ ಆಪ್ತ ಮಹಂತೇಶ್ ಶಿರೋಳ್ ತಲೆಮರೆಸಿಕೊಂಡಿದ್ದು ಸಧ್ಯ ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಮಹಂತೇಶ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವನಜಾಕ್ಷಿ ಕೂಡ 2019ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕೊಲೆಗಾರರು ಕಳೆದ 2 ವರ್ಷಗಳಿಂದ ಗುರೂಜಿ ಭಕ್ತರಾಗಿದ್ದರು ಎಂದೂ ಸಹ ಹೇಳಲಾಗ್ತಿದೆ. ಗುರೂಜಿಯಿಂದ ಪರಿಹಾರವನ್ನು ಕೇಳಿ ಅವರಿಂದ ಸೂಕ್ತ ಪರಿಹಾರ ಸಿಗದೇ ಈ ರೀತಿ ಮಾಡಿದ್ದಾರಾ ಎಂಬ ಅನುಮಾನ ಕೂಡ ಮೂಡಿದೆ. ಬೆಳಗ್ಗೆ ಗುರೂಜಿಗೆ ಕರೆ ಮಾಡಿದ್ದ ದುಷ್ಕರ್ಮಿಗಳು ಅವರು ಹುಬ್ಬಳ್ಳಿ ಹೋಟೆಲ್ ಇರುವುದನ್ನು ಧೃಡಪಡಿಸಿಕೊಂಡು ಅರ್ಧ ಗಂಟೆಗಳ ಕಾಲ ಕಾರಿನಲ್ಲಿಯೇ ಕುಳಿತು ಕಾದು ಬಳಿಕ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.