newsics.com
ಬೆಂಗಳೂರು: ಮೆಟ್ರೋ ಸಂಚಾರದಲ್ಲಿ ಸಮಯ ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಪ್ರತಿದಿನ ಮುಂಜಾನೆ ಹಾಗೂ ರಾತ್ರಿ 15 ನಿಮಿಷಕ್ಕೊಮ್ಮೆ ಮೆಟ್ರೊ ಸಂಚರಿಸಲಿದೆ.
15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ. ಬೆಳಗ್ಗೆ 5 ಗಂಟೆಯಿಂದ 6 ರವರೆಗೆ ಹಾಗೂ ರಾತ್ರಿ 10 ರಿಂದ 11 ಗಂಟೆವರೆಗೆ 15 ನಿಮಿಷಕ್ಕೊಮ್ಮೆ ಮೆಟ್ರೊ ಸಂಚರಿಸಲಿದೆ.
ಈವರೆಗೆ ಪ್ರತಿ 20 ನಿಮಿಷಕ್ಕೊಂದು ಮೆಟ್ರೋ ಸಂಚರಿಸುತ್ತಿತ್ತು.
ಬೆಂಗಳೂರಿನಲ್ಲಿ 1,105 ಸೇರಿ ರಾಜ್ಯದಲ್ಲಿ 1,694 ಜನರಿಗೆ ಕೊರೋನಾ ಸೋಂಕು