newsics.com
ಕಾರವಾರ: ಇಂಡೋ-ಪಾಕ್ ಯುದ್ಧದ ವೇಳೆ ಹೋರಾಡಿ ದೇಶದ ಗೌರವ ಹೆಚ್ಚಿಸಿದ್ದ ಚಾಪೆಲ್ ಯುದ್ಧನೌಕೆಗೆ ಈಗ ಸುರಕ್ಷತೆಯ ಆಸರೆ ಬೇಕಾಗಿದೆ.
ಕಾರವಾರದ ರವೀಂದ್ರನಾಥ ಕಡಲತೀರದಲ್ಲಿರುವ ಈ ಯುದ್ಧನೌಕೆ ಸೂಕ್ತ ರಕ್ಷಣೆಯಿಲ್ಲದೆ ಸೊರಗುತ್ತಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಈ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಇದರಿಂದಾಗಿ ಹಡಗಿನ ಕೆಲ ಭಾಗಗಳು ತುಕ್ಕು ಹಿಡಿದಿವೆ. ನೌಕೆಯ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು, ಕಾಡಿನ ನಡುವೆ ವಾರ್ ಶಿಪ್ ಇರುವಂತೆ ಭಾಸವಾಗುತ್ತಿದೆ.
ಮಳೆಯಿಂದ ರಕ್ಷಣೆ ನೀಡಲು ತಾಡಪಲ್ ಹಾಕಲಾಗಿದ್ದರೂ ಪ್ರಯೋಜನವಿಲ್ಲದಂತಾಗಿದೆ.
ಇಲ್ಲಿನ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದೆ ಹಿನ್ನೆಲೆಯಲ್ಲಿ ಹಲವರು ಕೆಲಸ ತೊರೆದಿದ್ದಾರೆ. ಇವರನ್ನು ಪುನಃ ನೇಮಕ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಈಗಿರುವ ನೌಕೆಯ ಸಂರಕ್ಷಣೆಯೇ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪದ ನಡುವೆಯೇ ಅಧಿಕಾರಿಗಳು ಇನ್ನೊಂದು ಯುದ್ದ ನೌಕೆ ತರಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಚಾಪೆಲ್ ಯುದ್ಧನೌಕೆಗೆ ಬೇಕಿದೆ ರಕ್ಷಣೆ
Follow Us