newsics.com
ಚಿಕ್ಕಮಗಳೂರು: ಯುವತಿಯೊಬ್ಬಳ ಫೋನ್ ಕರೆ ನಂಬಿ ತಾಲೂಕಿನ ಮುಗುಳುವಳ್ಳಿ ಗ್ರಾಮದ ಐವರು ಆನ್’ಲೈನ್ ವಂಚನೆಗೆ ಒಳಗಾಗಿದ್ದಾರೆ.
ಆನ್‍ಲೈನ್‍ನಲ್ಲಿ ಮೊಬೈಲ್ ಬುಕ್ ಮಾಡಿದ್ದ ಯುವಕನಿಗೆ ಮೊಬೈಲ್ ಬದಲು ಸ್ವೀಟ್ ಬಾಕ್ಸ್ ಸಿಕ್ಕಿದೆ. ಮುಗುಳುವಳ್ಳಿ ಗ್ರಾಮದ ತೀರ್ಥಕುಮಾರ್ ಆನ್‍ಲೈನ್ ನಂಬಿ ಮೋಸ ಹೋದವರು. ಕಳೆದ 20 ದಿನಗಳಲ್ಲಿ ಇದೇ ರೀತಿ ಐವರು ಮೋಸ ಹೋಗಿದ್ದಾರೆ.
ತೀರ್ಥಕುಮಾರ್ ಗೆ ಸೋಂನ್’ಪಾಪಡಿ ಬಂದಿದೆ. ಕೆಲವರಿಗೆ ವೇಸ್ಟ್ ಬಟ್ಟೆ. ಮತ್ತೆ ಕೆಲವರಿಗೆ ವೇಸ್ಟ್ ಬ್ಯಾಟರಿ ಹಾಗೂ ಚಾರ್ಜರ್ ಬಂದಿದೆ. ಎಲ್ಲರೂ 1,500 ರಿಂದ 2,500 ರೂ.ವರೆಗೆ ಹಣ ಹಾಕಿದ್ದಾರೆ.
ಎಂಟ್ಹತ್ತು ದಿನಗಳ ಹಿಂದೆ ತೀರ್ಥಕುಮಾರ್ ಗೆ ಯುವತಿಯೊಬ್ಬಳು ಫೋನ್ ಮಾಡಿದ್ದಳು. ನಿಮ್ಮ ನಂಬರ್ ಲಕ್ಕಿ ಡಿಪ್‍ನಲ್ಲಿ ಸೆಲೆಕ್ಟ್ ಆಗಿದೆ. ನೀವು 1,500 ಹಣ ನೀಡಿದರೆ, 15,000 ಸಾವಿರ ರೂ. ಬೆಲೆಬಾಳುವ ಹೆಸರಾಂತ ಕಂಪನಿಯ ಮೊಬೈಲ್ ಸಿಗಲಿದೆ ಎಂದಿದ್ದಾಳೆ.
ಅವಳ ಮಾತು ಕೇಳಿ ಹಳ್ಳಿಗರು ಮೊಬೈಲ್ ಬುಕ್ ಮಾಡಿ, ಎಂಟತ್ತು ದಿನಗಳಿಂದ ಹೊಸ ಮೊಬೈಲ್ ಗಾಗಿ ಕಾದಿದ್ದಾರೆ. ಮೊಬೈಲ್ ಬಂದಾಗಲೂ ಆ ಯುವತಿಗೆ ಫೋನ್ ಮಾಡಿದ್ದಾರೆ. ಆಗಲೂ ಆಕೆ ಓಪನ್ ಮಾಡಿ, ಏನೂ ಮೋಸ ಇಲ್ಲ ಎಂದಿದ್ದಕ್ಕೆ ಪೋಸ್ಟ್ ಆಫೀಸ್‍ನಲ್ಲಿ ಹಣ ಕಟ್ಟಿ ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಆಕೆಯೊಂದಿಗೆ ಮಾತನಾಡಿಕೊಂಡೇ ಬಾಕ್ಸ್ ಓಪನ್ ಮಾಡಿದ್ದಾರೆ. ನಂತರ ಅದೇ ನಂಬರ್ ಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಆಗ ಹಳ್ಳಿಗರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.
ಬಟ್ಟೆ ಬದಲಿಸುವ ವಿಡಿಯೋ ಬಳಸಿ ಬ್ಲ್ಯಾಕ್’ಮೇಲ್: ವಿವಾಹಿತೆ ಮೇಲೆ ವೃದ್ಧರಿಂದ ಸಾಮೂಹಿಕ ಅತ್ಯಾಚಾರ
ಜಾಗತಿಕ ತಾಪಮಾನ ದುಷ್ಪರಿಣಾಮ: ಮಂಗಳೂರು, ಮುಂಬೈ ಸೇರಿ 12 ನಗರಗಳಿಗೆ ಅಪಾಯ