newsics.com
ಬೆಂಗಳೂರು: ರಾಜಧಾನಿ ಬೆಂಗಳೂರು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಮಕ್ಕಳ ಮಾರಾಟ ಜಾಲವನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಯಲು ಮಾಡಿದ್ದಾರೆ. ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಈ ಜಾಲ ಬೇಧಿಸಿದೆ.
13 ಮಕ್ಕಳನ್ನು ವಿಶೇಷ ತಂಡ ರಕ್ಷಿಸಿದೆ. ಆಸ್ಪತ್ರೆಗೆ ಮೊದಲು ಭೇಟಿ ಮಾಡುತ್ತಿದ್ದ ತಂಡದ ಸದಸ್ಯರು ಅಲ್ಲಿ ಬಡತನದಿಂದ ಬಳಲುತ್ತಿರುವ ಗರ್ಭಿಣಿಯರನ್ನು ಪತ್ತೆ ಹಚ್ಚುತ್ತಿದ್ದರು. ಮಗು ಸಾಕಲು ಅಸಮರ್ಥರಾಗಿದ್ದಾರೆ ಎಂದು ಗೊತ್ತಾದ ಕೂಡಲೇ ಅವರ ಜತೆ ಮಾತುಕತೆ ಆರಂಭಿಸುತ್ತಿದ್ದರು.
ಕಡಿಮೆ ಹಣ ನೀಡಿ ನವಜಾತ ಶಿಶು ಖರೀದಿಸುತ್ತಿದ್ದರು. ಬಳಿಕ ಹೆಚ್ಚಿನ ಹಣಕ್ಕೆ ಇತರರಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಮಗು ಪಡೆದುಕೊಂಡವರಿಗೆ ಮಗುವಿನ ತಾಯಿ ಎಂದು ಬೇರೆ ಮಹಿಳೆಯರನ್ನು ಪರಿಚಯಿಸುತ್ತಿದ್ದರು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಧನಲಕ್ಷ್ಮಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.