ಉತ್ತರ ಕನ್ನಡ: ಕಾಲ ಬದಲಾದರೂ ಹೆಣ್ಣು ಗಂಡೆಂಬ ಬೇಧ-ಭಾವದ ಮನೋಭಾವ ಬದಲಾಗಿಲ್ಲ. ಹೆಣ್ಣೆಂಬ ಕಾರಣಕ್ಕೆ ಹೆತ್ತವರೇ ಒಂದು ತಿಂಗಳ ಮಗುವನ್ನು ಬಾವಿಗೆಸೆದು ಕೊಲೆಗೈಯ್ದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.
ಅರ್ಚಕನಾಗಿರುವ ಚಂದ್ರಶೇಖರ ಭಟ್ ಹಾಗೂ ಆತನ ಪತ್ನಿ ಪ್ರಿಯಾಂಕಾ ಎಂಬುವವರೇ ಇಂಥ ಕೃತ್ಯ ಎಸಗಿದ ರಾಕ್ಷಸಿ ಪೋಷಕರು.
ಯಲ್ಲಾಪುರದ ರಾಮನಕೊಪ್ಪ ನಿವಾಸಿ ಚಂದ್ರಶೇಖರ ಹಾಗೂ ಪ್ರಿಯಾಂಕಾ ಅವರ ೪೦ ದಿನದ ಮಗುವಿನ ಮೃತದೇಹ ಸ್ಥಳೀಯ ಬಾವಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಪೋಷಕರು ತಮ್ಮ ಮಗು ಮನೆಯಲ್ಲಿ ತೊಟ್ಟಿಲಲ್ಲಿ ಮಲಗಿದ್ದ ವೇಳೆ ಕಾಣೆಯಾಗಿದೆ ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ ಈ ಪೋಷಕರ ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ.
ರಾಜ್ಯದಾದ್ಯಂತ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ, ಹಲವೆಡೆ ರೆಡ್ ಅಲರ್ಟ್ ಘೋಷಣೆ
ಹೆಣ್ಣು ಮಗು ಎಂಬ ಕಾರಣಕ್ಕೆ ಈ ದಂಪತಿ ತಮ್ಮ ೪೦ ದಿನದ ಹೆಣ್ಣು ಶಿಶುವನ್ನು ಕೈಯ್ಯಾರೆ ಬಾವಿಗೆ ಎಸೆದಿದ್ದು ಬಳಿಕ ಮಗು ಕಿಡ್ನಾಪ್ ಕತೆ ಕಟ್ಟಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದರು.
೪೦ ದಿನದ ಕಂದಮ್ಮ ತನುಶ್ರೀ ಕೊಲೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಹೆತ್ತವರನ್ನು ಬಂಧಿಸಿದ್ದಾರೆ. ಈ ಕ್ರೂರ ಹೆತ್ತವರ ಕೃತ್ಯ ಇದೀಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.