newsics.com
ನವದೆಹಲಿ: ಭಾರತೀಯರಿಗೆ ಮತ್ತು ಭಾರತದಲ್ಲಿ ನೆಲೆಸಿರುವಂತಹ ವಿದೇಶಿಯರಿಗೆ ಚೀನಾ ತಾತ್ಕಾಲಿಕವಾಗಿ ವಿಮಾನ ಸೇವೆಯನ್ನು ನಿರ್ಬಂಧಿಸಿದೆ.
ಈ ಆದೇಶವು ಚೀನಾ ವೀಸಾ ಮತ್ತು ರೆಸಿಡೆನ್ಸ್ ಪರ್ಮಿಟ್ಸ್ ಹೊಂದಿರುವ ವಿದೇಶಿಗರಿಗೆ ಅನ್ವಯವಾಗುತ್ತದೆ ಎಂದು ಚೀನಾ ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ನಿರ್ಬಂಧ ತಾತ್ಕಲಿಕವಾಗಿರಲಿದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚೀನಾ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ ರಾಜತಾಂತ್ರಿಕ ಹಾಗೂ ಸಿ ವೀಸಾಗಳನ್ನ ಹೊಂದಿರುವ ವಿದೇಶಿಗರ ಮೇಲೆ ಈ ನಿರ್ಬಂಧ ಪರಿಣಾಮ ಬೀರುವುದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಚೀನಾಗೆ ಭೇಟಿ ನೀಡುವ ವಿದೇಶಿಗರು ವೀಸಾ ಅರ್ಜಿಯನ್ನ ಭಾರತ – ಚೀನಿ ರಾಯಭಾರಿ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದೆ.
ಭಾರತ ಮಾತ್ರವಲ್ಲದೆ, ಬ್ರಿಟನ್, ಬೆಲ್ಜಿಯಂ, ಫಿಲಿಫೈನ್ಸ್ ದೇಶಿಯರಿಗೂ ಚೀನಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ವಂದೇ ಭಾರತ್ ಮಿಷನ್ ವಿಮಾನದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವ ಚೀನಾ, ಈವರೆಗೂ ಏರ್ ಇಂಡಿಯಾ ವಿಶೇಷ ವಿಮಾನಗಳು ಚೀನಾಕ್ಕೆ ಪ್ರಯಾಣಿಸುತ್ತಿದ್ದವು.
ಕೆಬಿಸಿಯಲ್ಲಿ ಕೋಟಿ ರೂ. ಗೆದ್ದ ನಾಜಿಯಾ
ಕಾಲೇಜು ಆರಂಭಕ್ಕೆ ಯುಜಿಸಿ ಮಾರ್ಗಸೂಚಿ
ಅಶ್ಲೀಲ ಚಿತ್ರೀಕರಣ: ನಟಿ ಪೂನಂ ಪಾಂಡೆ ಬಂಧನ, ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತು
ವಾಟ್ಸ್ಯಾಪ್ ಹೊಸ ಫೀಚರ್: ಏಳು ದಿನದಲ್ಲಿ ಮೆಸೇಜ್ ಮಾಯ