newsics.com
ಮೈಸೂರು: ಕೊರೋನಾ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಬಿಗಿ ನಿರ್ಬಂಧ ಕ್ರಮಗಳಿಂದ ಆದಾಯ ಕುಸಿತ ಉಂಟಾಗಿರುವ ಕಾರಣ ಚಿತ್ರಮಂದಿರಗಳನ್ನು ಮುಚ್ಚಲು ಮೈಸೂರಿನ ಚಿತ್ರ ಮಂದಿರ ಮಾಲೀಕರು ತೀರ್ಮಾನಿಸಿದ್ದಾರೆ.
ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ರದ್ದು ಪಡಿಸುವ ತನಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಬೇಡ ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೊರೋನಾ ಬಿಗಿ ಕ್ರಮಗಳಿಂದ ಮೈಸೂರಿಗೆ ಪ್ರವಾಸಿಗರ ಸಂಖ್ಯೆಯಲ್ಲಿ ತೀರಾ ಇಳಿ ಮುಖವಾಗಿದೆ.