newsics.com
ರಾಮನಗರ: ರಾಜ್ಯದ ರಾಮ ನಗರ ಜಿಲ್ಲೆಯ ಚನ್ನಪಟ್ಟಣ ಸಮೀಪದ ಲಾಳ ಘಟ್ಟ ಎಂಬಲ್ಲಿ ಮನೆಯೊಂದರಲ್ಲಿ ಮಂಗಳ ಮುಖಿಯರು ಪಾರ್ಟಿ ಮಾಡುತ್ತಿದ್ದಾಗ ನಾಲ್ಕು ಮಂದಿಯ ತಂಡ ಅಲ್ಲಿಗೆ ನುಗ್ಗಿದೆ.
ಇದಕ್ಕೆ ಮಂಗಳ ಮುಖಿಯರು ತೀವ್ರ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಹೊಡೆದಾಟದಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹತ್ಯೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಮಂಗಳ ಮುಖಿಯರು ಪಾರ್ಟಿ ಮಾಡುವಾಗ ಯಾರಿಗೂ ಅಲ್ಲಿಗೆ ಪ್ರವೇಶ ಮಾಡಲು ಅವಕಾಶ ಕಲ್ಪಿಸುವುದಿಲ್ಲ.