ಮಂಗಳೂರು: ಇಬ್ಬರನ್ನು ಬಲಿ ಪಡೆದುಕೊಂಡ ಮಂಗಳೂರು ಹಿಂಸಾಚಾರ ಕುರಿತಂತೆ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಮಂಗಳೂರಿನ ಗಲಭೆ ಹಿಂದೆ ಕೇರಳದ ಕೆಲವು ಶಕ್ತಿಗಳ ಕೈ ವಾಡ ಇದೆ ಎಂದು ಆರೋಪಿಸಲಾಗಿತ್ತು. ರಾಜ್ಯದಲ್ಲಿ ಶಾಂತಿ ಮತ್ತು ಕಾನೂನು ವ್ಯವಸ್ಥೆ ಹಾಳು ಮಾಡುವ ಸಂಚಿನಿಂದ ಈ ಗಲಭೆ ಸೃಷ್ಟಿಸಲಾಗಿದೆ ಎಂಬ ಸಂಶಯವನ್ನು ಕೂಡ ಪೊಲೀಸರು ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಕೈಮೀರಿ ಹೋದಾಗ, ಗಲಭೆ ನಿಯಂತ್ರಿಸಲು ಗೋಲಿಬಾರ್ ನಡೆಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು.