ಬೆಂಗಳೂರು: ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ.21ರಿಂದ 25ರವರೆಗೆ ಸ್ವಿಟ್ಜರ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ. ಈ ಸಮ್ಮೇಳನದಲ್ಲಿ ಎಲ್ಲ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ.
ಯಡಿಯೂರಪ್ಪ ಅವರ ಸ್ವಿಟ್ಜರ್ಲೆಂಡ್ ಪ್ರವಾಸ ಹಿನ್ನೆಲೆಯಲ್ಲಿ ಜ.20ರಂದು ನಿಗದಿಯಾಗಿದ್ದ ಜಂಟಿ ಅಧಿವೇಶನವನ್ನು ಜನವರಿ 27ಕ್ಕೆ ಮುಂದೂಡಲಾಗುವುದು. ಈ ಸಂಬಂಧ ಡಿ.30 ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಸ್ವಿಟ್ಜರ್ಲೆಂಡ್ ಪ್ರವಾಸದಿಂದಾಗಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಕೂಡ ಮುಂದೂಡಿಕೆಯಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಎಸ್ ವೈ ಸ್ವಿಟ್ಜರ್ಲೆಂಡ್ ಪ್ರವಾಸ; ಜಂಟಿ ಅಧಿವೇಶನ ಮುಂದೂಡಿಕೆ?
Follow Us