ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಕಾವು ಜೋರಾದ ಬೆನ್ನಲ್ಲೇ ಸಿಎಂ ಬಿಎಸ್ವೈ ಶುಕ್ರವಾರ ರೈತರ ಸಭೆ ಕರೆದಿದ್ದಾರೆ. ಈ ವಿಚಾರವನ್ನು ಪ್ರತಿಭಟನಾನಿರತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ª ಸಿಎಂ ಜೊತೆ ನಡೆಯುವ ಸಭೆಯಲ್ಲಿ ಹೊಸ ಕಾನೂನುಗಳಿಂದ ರೈತರಿಗೆ ಆಗುವ ಅನ್ಯಾಯದ ಕುರಿತು ಸರ್ಕಾರದ ಗಮನಕ್ಕೆ ತಂದು ಸುಗ್ರೀವಾಜ್ಞೆ ಮೂಲಕ ವಾಪಸ್ ಪಡೆಯಲು ಒತ್ತಾಯಿಸಲಾಗುವುದು ಎಂದಿದ್ದಾರೆ.
ರೈತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಸಿಎಂ ರೈತರ ಸಭೆ ಕರೆದಿದ್ದು, ಸೆ.28 ರಂದು ರೈತರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಕೈಬಿಡುವಂತೆ ರೈತರ ಮನವೊಲಿಸುವ ಪ್ರಯತ್ನ ನಡೆಸುವ ಸಾಧ್ಯತೆ ಇದೆ.
ರೈತರ ಸಭೆ ಕರೆದ ಸಿಎಂ ಬಿಎಸ್ವೈ
Follow Us