ಸಿಎಂ ಬೆಂಗಾವಲು ವಾಹನ ಪಲ್ಟಿ

NEWSICS.COM ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪ ಬೆಂಗಾವಲು ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ. ಬಿ.ಎಸ್ ಯಡಿಯೂರಪ್ಪ ಮಂಗಳೂರಿನಲ್ಲಿ ಕಾರ್ಯಕಾರಿಣಿ ಸಭೆ ಮುಗಿಸಿ ವಾಪಸ್ಸಾಗುವಾಗ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಈ ಅಫಘಾತ ನಡೆದಿದೆ. ಜೀಪ್ ಚಲಾಯಿಸುವಾಗ ಬ್ರೇಕ್ ಜಾಮ್ ಆಗಿ ಪಲ್ಟಿಯಾಗಿ, ವಾಹನದ ಟಾಯರ್ ಸ್ಪೋಟಗೊಂಡಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೆ ಮೈದಾನಕ್ಕಿಳಿಯಲು ಸಿದ್ಧವಾದ ಪಿ.ವಿ ಸಿಂಧು