Wednesday, May 18, 2022

ಲಸಿಕೆ ಪಡೆದ 3 ಮಕ್ಕಳ‌ ಸಾವಿಗೆ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯ ಕಾರಣವೆಂದ ವರದಿ, ಮಾಹಿತಿ‌ ಕೇಳಿದ ಸಿಎಂ

Follow Us

newsics.com
ಬೆಳಗಾವಿ: ರುಬೆಲ್ಲಾ ಲಸಿಕೆ ಪಡೆದ ಬೆಳಗಾವಿಯ ಮೂವರು ಮಕ್ಕಳ ಸಾವಿಗೆ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್‌ಸಿಹೆಚ್ಒ) ಈಶ್ವರಪ್ಪ ಗಡದ್ ಹೇಳಿದ್ದಾರೆ.
ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರೋಗ್ಯ ಸಿಬ್ಬಂದಿ ಜ.10ರಂದು ಲಸಿಕೆ ಸಂಗ್ರಹಿಸಿದ್ದಾರೆ. ಬಳಕೆಯಾಗದ ಲಸಿಕೆಯನ್ನು ಹಿಂತಿರುಗಿಸದೆ ಹಳೆಯ ಲಸಿಕೆಯಿಟ್ಟಿದ್ದ ಬಾಕ್ಸ್‌ನಲ್ಲಿಯೇ ಲಸಿಕೆಗಳನ್ನು ಇಟ್ಟಿದ್ದಾರೆ. ನಂತರ ಜನವರಿ 11 ಮತ್ತು 12 ರಂದು ಮಕ್ಕಳಿಗೆ ಅದೇ ಲಸಿಕೆ ನೀಡಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದ ಹೇಳಿದರು.
ಮಕ್ಕಳಿಗೆ ನೀಡುವ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಐಎಲ್ಆರ್ ರೆಫ್ರಿಜರೇಟರ್ ನಲ್ಲಿಯೇ ಇಡಬೇಕು. 2 ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಲಸಿಕೆ ಇಡಬೇಕು. ಆದರೆ, ಲಸಿಕಾಕರಣಕ್ಕಾಗಿ ಜ.10ರಂದು ಲಸಿಕೆ ವಯಲ್ ತೆಗೆದುಕೊಂಡಿದ್ದ ಆರೋಗ್ಯ ಸಿಬ್ಬಂದಿ 2 ದಿನ ಹೋಟೆಲ್‌ನ ಫ್ರಿಡ್ಜ್‌ನಲ್ಲಿಟ್ಟಿದ್ದರು. ಇದರ ಪರಿಣಾಮ ಜ.12 ರಂದು ಓರ್ವ ಮತ್ತು ಜ.16ರಂದು ಇಬ್ಬರು ಮಕ್ಕಳು ಮೃತಪಟ್ಟಿದ್ದರು.

ಇನ್ನಿಬ್ಬರು ಮಕ್ಕಳಲ್ಲೂ ವಾಂತಿ, ಭೇದಿ, ಜ್ವರ ಲಕ್ಷಣ ಕಂಡುಬಂದಿದ್ದು, ಈಗಲೂ ಇಬ್ಬರೂ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಥಮಿಕ ತನಿಖಾ ವರದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ, ನರ್ಸ್ ಹಾಗೂ ಫಾರ್ಮಸಿಸ್ಟ್ ನ ನಿರ್ಲಕ್ಷ್ಯದಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಮೂವರು ಮಕ್ಕಳ ಸಾವಿನ ಕುರಿತು ವಿಸ್ತೃತ ವರದಿ ನೀಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಕೊರೋನಾದಿಂದ ಹೊಸದಾಗಿ ಬಡವರಾದ 16 ಕೋಟಿಗೂ ಹೆಚ್ಚು ಜನ! ಶೇ.99ರಷ್ಟು ಜನರ ಆದಾಯ ಕುಸಿತ

ಕೊರೋನಾ ಆರ್ಭಟ: ಎರಡೇ ವರ್ಷದಲ್ಲಿ 358 ಕೋಟಿ ಡೋಲೊ-650 ಮಾತ್ರೆ ಮಾರಾಟ!

18 ವರ್ಷಗಳ ದಾಂಪತ್ಯ ಬದುಕು ಕೊನೆಗೊಳಿಸಿದ ನಟ ಧನುಷ್- ಐಶ್ವರ್ಯಾ

ಮತ್ತಷ್ಟು ಸುದ್ದಿಗಳು

Latest News

ಪಿ ಎಸ್ ಐ ಅಕ್ರಮ ನೇಮಕಾತಿ: ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

newsics.com ಕಲಬುರಗಿ: ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಪ್ರಭು ಹಾಗೂ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಲಬುರಗಿಯ ಮೂರನೇ ಜೆ...

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ ದುರಂತ ಸಂಭವಿಸಿದೆ. ಗುಜರಾತ್‌ನ ಕೈಗಾರಿಕಾ ಸಚಿವ ಬೃಜೇಶ್...

ಕನ್ನಡ ಕಲಿಕೆಗೆ‌ ಬಂತು ಸರ್ಕಾರಿ ಇ- ಪೋರ್ಟಲ್

newsics.com ಬೆಂಗಳೂರು: ಕನ್ನಡ ಕಲಿಯುವವರಿಗಾಗಿ ಸರ್ಕಾರಿ ಇ‌- ಕನ್ನಡ ಪೋರ್ಟಲ್ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಕರ್ನಾಟಕ ಹಾಗು ಹೊರಗೆ ವಾಸಿಸುತ್ತಿರುವ ಕನ್ನಡೇತರರು ಸರ್ಕಾರಿ ವೆಬ್ ಸೈಟ್‌ನಲ್ಲಿ ಕನ್ನಡ ಕಲಿಯಬಹುದು. ಇ-ಕನ್ನಡ ಪೋರ್ಟಲ್‌ಗೆ ಹೋಗಿ ಆನ್‌ಲೈನ್...
- Advertisement -
error: Content is protected !!