Thursday, December 2, 2021

ರಾಜ್ಯದಲ್ಲಿ ಒಂದು ವಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಸಿಎಂ

Follow Us

ಬೆಂಗಳೂರು : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾಳೆಯಿಂದ ಶಾಲಾ ಕಾಲೇಜು ಸೇರಿದಂತೆ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರಗಳು, ನೈಟ್ ಕ್ಲಬ್ ಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾಳೆಯಿಂದ ಒಂದು ವಾರಗಳ ಕಾಲ ರಾಜ್ಯಾದ್ಯಂತ ಕ್ರಿಕೆಟ್, ಫುಟ್ ಬಾಲ್ ನಂತಹ ಕ್ರೀಡೆಗಳು, ಮಾಲ್, ಚಿತ್ರಮಂದಿರಗಳು, ವಿಚಾರ ಸಂಕಿರಣಗಳನ್ನು ಸ್ಥಗಿತಗೊಳಿಸಲಾಗುವುದು. ರಾಜ್ಯದಲ್ಲಿ ಮದುವೆ, ಜಾತ್ರೆ ಸೇರಿ ಎಲ್ಲ ಬಗೆಯ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯಗಳು ಕೂಡ ಒಂದು ವಾರ ಕಾಲ ಬಂದ್ ಆಗಲಿವೆ. ಈಗಾಗಲೇ ಒಂದರಿಂದ ಆರನೇ ತರಗತಿಯವರೆಗೆ ರಜೆ ಘೋಷಿಸಲಾಗಿದೆ. ಉಳಿದಂತೆ ಎಸ್ ಎಸ್ ಎಲ್ ಸಿ ಮತ್ತಿತರ ಪರೀಕ್ಷೆಗಳು, ವಿಧಾನಮಂಡಲ ಅಧಿವೇಶನ, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ವಿವರಿಸಿದರು.

ತುರ್ತು ಕ್ರಮಗಳಾಗಿ ಈ ಘೋಷಣೆ ಮಾಡಲಾಗಿದ್ದು, ಒಂದು ವಾರದ ನಂತರ ಪರಿಸ್ಥಿತಿ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಐಟಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಆಯಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಹವಾನಿಯಂತ್ರಿತ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುವವರು ಕೂಡ ಒಂದು ವಾರ ಕಾಲ ಮನೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡುತ್ತಿದ್ದೇವೆ ಎಂದರು.

ಬೆಂಗಳೂರು ನಗರದಲ್ಲಿ ಶೇ.70ರಷ್ಟು ಜನರು ಸ್ವಯಂ ಜಾಗೃತಿ ಕೈಗೊಂಡಿದ್ದಾರೆ. ಸಾರ್ವಜನಿಕರು ಈ ಕ್ರಮಗಳಿಗೆ ಸಹಕರಿಸಬೇಕು. ಸಾಧ್ಯವಾದಷ್ಟು ಪ್ರವಾಸ ಕೈಗೊಳ್ಳದಿರಿ, ಜನರಿಂದ ಆರು ಅಡಿ ಅಂತರದಲ್ಲಿರಿ, ಹಸ್ತಲಾಘವ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಮತ್ತಷ್ಟು ಸುದ್ದಿಗಳು

Latest News

ಒಮಿಕ್ರಾನ್ ಸೋಂಕಿತನ ಐವರು ಸಂಪರ್ಕಿತರಿಗೂ ಕೊರೋನಾ ಪಾಸಿಟಿವ್

newsics.com ಬೆಂಗಳೂರು: ರಾಜ್ಯದಲ್ಲಿ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಇವರ ಸಂಪರಕದಲ್ಲಿದ್ದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪೈಕಿ ಐವರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಿಂದ ಬಂದಿರುವ...

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...
- Advertisement -
error: Content is protected !!