newsics.com
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ಮಾರ್ಗ 2024ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ನಮ್ಮ ಮೆಟ್ರೋ ಹೇಳಿದೆ.
ಭೂ ಸ್ವಾಧೀನ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಏರ್ ಪೋರ್ಟ್ ಆವರಣದೊಳಗೆ ಎರಡು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ಅದಕ್ಕೆ ಅಂತಿಮ ರೂಪುರೇಷೆಗಳನ್ನು ಇದೀಗ ನೀಡಲಾಗುತ್ತಿದೆ. ಈ ಹಂತದಲ್ಲಿ 2 ಬಿ ಮಾರ್ಗ 38.44 ಕಿಲೋಮೀಟರ್ ಅಂತರ ಹೊಂದಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಏರ್ ಪೋರ್ಟ್ ಮಾರ್ಗದಲ್ಲಿ ಬೆನ್ನಿಗಾನಹಳ್ಳಿ, ಹೊರಮಾವು, ಹೆಚ್ ಆರ್ ಬಿಆರ್ ಲೇಔಟ್, ಕಲ್ಯಾಣ್ ನಗರ, ಹೆಚ್ ಬಿಆರ್ ಲೇಔಟ್,. ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೋಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟ ಹಲಸೂರು, ದೊಡ್ಡ ಜಾಲ, ಏರ್ ಪೋರ್ಟ್ ಸಿಟಿ ಮತ್ತು ಕೆಐಎ ಟರ್ಮಿನಲ್ ಸೇರಿದಂತೆ 17 ಮೆಟ್ರೋ ನಿಲ್ದಾಣಗಳಿರಲಿವೆ. ಈ ಪೈಕಿ ಎರಡು ಮೆಟ್ರೋ ನಿಲ್ದಾಣಗಳ ನಿರ್ಮಾಣ ವೆಚ್ಚವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭರಿಸಲಿದೆ.