Thursday, August 18, 2022

ಮಟ ಮಟ ಮಧ್ಯಾಹ್ನ ರಕ್ತದೋಕುಳಿ: ಚಂದ್ರಶೇಖರ್ ಗುರೂಜಿ ದುರಂತ ಅಂತ್ಯದ ಕಂಪ್ಲೀಟ್ ಕಹಾನಿ

Follow Us

newsics.com

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಳವಾರ ಮಟ ಮಟ ಮಧ್ಯಾಹ್ನ ಇಡೀ ಕರ್ನಾಟಕವೇ ಬೆಚ್ಚಿ ಬೀಳುವಂತಹ ಘಟನೆಯೊಂದು ಜರುಗಿದೆ.

ಸರಳ ವಾಸ್ತು ಮೂಲಕ ರಾಜ್ಯಕ್ಕೆ ಚಿರಪರಿಚಿತ ಎನಿಸಿದ್ದ ಡಾ.ಚಂದ್ರಶೇಖರ ಗುರೂಜಿ ತಮ್ಮ ಆಪ್ತರ ಮಾಸ್ಟರ್ ಪ್ಲಾನ್‌ಗೆ ಬಲಿಯಾಗಿ ಹೋಗಿದ್ದಾರೆ. ಆಶೀರ್ವಾದ ತೆಗೆದುಕೊಳ್ಳುವ ನೆಪದಲ್ಲಿ ಗುರೂಜಿ ಬಳಿ ಬಂದಿದ್ದ ಇಬ್ಬರು ಹಂತಕರು ಬರ್ಬರವಾಗಿ ಗುರೂಜಿಯನ್ನು ಕೊಲೆಗೈದಿದ್ದಾರೆ.

40 ಸೆಕೆಂಡು 60 ಬಾರಿ ಇರಿತ: ಮನುಷ್ಯನಾದವನು ಇಂತಹ ಕೃತ್ಯ ಎಸಗಲಿಕ್ಕೆ ಸಾಧ್ಯವೇ ಇಲ್ಲ ಎಂಬಂತಹ ರೀತಿಯ ಬರ್ಬರ ಕೊಲೆ ಇದು. ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಗುರೂಜಿ ತಂಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಈ ಹಂತಕರಿಗಿತ್ತು. ಹೀಗಾಗಿ ಬೆಳಗ್ಗೆ 10 ಗಂಟೆಯಿಂದಲೇ ಹೋಟೆಲ್‌ನ ಬಳಿ ಹೊಂಚು ಹಾಕಿ ಕುಳಿತಿದ್ದ ಕೊಲೆಗಡುಕರು ಸ್ವಾಮೀಜಿ ರೂಮಿನಿಂದ ಹೊರಬಂದಿದ್ದೇ ತಡ ತಮ್ಮ ಪ್ಲಾನ್‌ನ್ನು ಜಾರಿಗೆ ತಂದಿದ್ದರು. ಗುರೂಜಿಯ ಕಾಲಿಗೆ ಬಿದ್ದಂತೆ ನಾಟಕವಾಡಿದ ಇವರು ಅತ್ಯಂತ ಹೇಯವಾಗಿ ಕೊಲೆಗೈದಿದ್ದಾರೆ.

ಆಪ್ತರಿಂದಲೇ ದುರಂತ ಅಂತ್ಯ ಕಂಡ ವಾಸ್ತು ಶಾಸ್ತ್ರಜ್ಞ

ಚಂದ್ರಶೇಖರ್ ಗುರೂಜಿಯನ್ನು ಕೊಲೆಗೈದಿದ್ದು ಯಾರೋ ಅಪರಿಚಿತರಲ್ಲ. ಬದಲಾಗಿ ಇವರ ಜೊತೆಯಲ್ಲೇ ಓಡಾಡಿಕೊಂಡಿದ್ದ ಆಪ್ತರು. ಮಹಾಂತೇಶ್ ಶಿರೋಳ್ ಹಾಗೂ ಮಂಜುನಾಥ್ ದುಮ್ಮವಾಡ ಈ ಕೊಲೆಗೈದ ಹಂತಕರು. ಮಂಜುನಾಥ್ ಗುರೂಜಿಯ ಕಾಲಿಗೆರಗಿದಂತೆ ನಾಟಕವಾಡಿದರೆ ವ್ಯಾಘ್ರನಂತೆ ಮೈಮೇಲೆ ಎರಗಿದ ಮಹಾಂತೇಶ್ ಗುರೂಜಿಯ ಮೇಲೆ ಬರೋಬ್ಬರಿ 60 ಬಾರಿ ಚಾಕುವಿನಿಂದ ಇರಿದು ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿದ್ದ.

ಗುರೂಜಿ ಕೊಲೆಗೆ ಆಕೆಯೇ ಕಾರಣ..? : ಚಂದ್ರಶೇಖರ್ ಗುರೂಜಿ ಕೊಲೆಯಾಗುತ್ತಿದ್ದಂತೆಯೇ ಕೇಳಿಬಂದ ಹೆಸರೇ ವನಜಾಕ್ಷಿ. ಈಕೆ 2019ರವರೆಗೂ ಚಂದ್ರಶೇಖರ್ ಗುರೂಜಿ ಮಾಲೀಕತ್ವದ ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದವಳು. ದುರಂತ ಅಂದರೆ ಈ ಕೊಲೆಗಾರ ಮಹಾಂತೇಶ್ ಹಾಗೂ ವನಜಾಕ್ಷಿಗೆ ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿ. ಮದುವೆ ಮಾಡಿಸಿದ ಬಳಿಕ ಈ ದಂಪತಿಗೆ ಉಳಿಯೋಕೆ ಫ್ಲಾಟ್‌ನ್ನೂ ಕೊಟ್ಟಿದ್ದರಂತೆ. ಅಲ್ಲದೇ ವನಜಾಕ್ಷಿ ಹೆಸರಲ್ಲಿ ಗುರೂಜಿ ಬೇನಾಮಿ ಆಸ್ತಿಯನ್ನೂ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ವನಜಾಕ್ಷಿಯನ್ನು ಗೋಕುಲ್ ರೋಡ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ಊಹೆ ಕೂಡ ಬಹುಶಃ ಈ ಆರೋಪಿಗಳಿಗೆ ಇರಲಿಕ್ಕಿಲ್ಲ. ಇದ್ದಿದ್ದರೆ ಬಹುಶಃ ಇಷ್ಟೊಂದು ಹೇಯವಾಗಿ ಕೊಲೆ ಮಾಡುತ್ತಿರಲಿಲ್ಲವೇನೋ. ಇನ್ನೇನು ಪೊಲೀಸರು ತಮ್ಮ ಎನ್ಕೌಂಟರ್ ಮಾಡಬಹುದು ಎಂಬ ಭಯವಿತ್ತೋ ಏನೋ ಇವರೇ ಹುಬ್ಬಳ್ಳಿ ಪೊಲೀಸರಿಗೆ ಕರೆ ಮಾಡಿ ನಾವು ಬೆಳಗಾವಿ ಮಾರ್ಗದಲ್ಲಿ ಹೋಗ್ತಾ ಇದೀವಿ ಎಂಬ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಅಲರ್ಟ್ ಆದ ಹುಬ್ಬಳ್ಳಿ ಹಾಗೂ ರಾಮದುರ್ಗ ಠಾಣಾ ಪೊಲೀಸರು ಜಂಟಿಯಾಗಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ವಾಸ್ತು ಶಾಸ್ತ್ರದ ಮೂಲಕವೇ ಸಾಕಷ್ಟು ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಿದ್ದ ಚಂದ್ರಶೇಖರ್ ಗುರೂಜಿ ಕಾಲಾಂತರದಲ್ಲಿ ತಮ್ಮದೇ ಆದ ಚಾನೆಲ್ ಕೂಡ ಆರಂಭಿಸಿದ್ದರು. ರಾಜ್ಯದ ಜನತೆಗೆ ಪರಿಚಿತವೇ ಎನಿಸಿದ್ದ ಈ ಮುಖ ಮುಂದೊಂದು ಇಷ್ಟೊಂದು ಹೇಯವಾಗಿ ಕೊಲೆಯಾಗ್ತಾರೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಯಾರು ಯಾರಿಗೂ ಬಯಸದಂತಹ ರೀತಿಯಲ್ಲಿ ಚಂದ್ರಶೇಖರ್ ಗುರೂಜಿ ಜೀವನ ಅಂತ್ಯ ಕಂಡಿದ್ದು ಮಾತ್ರ ದುರಂತವೇ ಸರಿ. ಹೀಗೆ ಅಂತ್ಯವಾಗಲು‌ ಯಾರೇ ಆಗಿರಲಿ, ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಳಿಕ ದೂರ ಇಡುವ ಗುರೂಜಿಯವರ ಸ್ವಭಾವ ಕೂಡ ಕಾರಣ ಎನ್ನುತ್ತಾರೆ ಅವರನ್ನು‌ ಬಲ್ಲವರು.

ಫ್ಲ್ಯಾಟ್ ವಾಪಸ್ ಕೊಡಿ ಎಂದಿದ್ದಕ್ಕೆ ಗುರೂಜಿ ಹತ್ಯೆ..?

ಮತ್ತಷ್ಟು ಸುದ್ದಿಗಳು

vertical

Latest News

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...
- Advertisement -
error: Content is protected !!