ಕಲಬುರ್ಗಿ: ಕನ್ನಡ ಸಾಹಿತ್ಯ ಸಮ್ಮೇಳನದ ಸಭಾಂಗಣದಲ್ಲಿ ಮಕ್ಕಳ ಸಾಹಿತ್ಯ ಗೋಷ್ಟಿಯಲ್ಲಿ ಚಿಣ್ಣರ ಮೊಬೈಲ್ ತಂತ್ರಜ್ಞಾನ ಬಳಕೆ ಕುರಿತ ಆತಂಕ ವ್ಯಕ್ತವಾಯಿತು. ಸಾಹಿತಿ ರಾಜಶೇಖರ ಕುಕ್ಕುಂದ ಅವರು ತಮ್ಮ ಭಾಷಣದಲ್ಲಿ ಈ ಕುರಿತು ಆತಂಕ ವ್ಯಕ್ತಪಡಿಸಿದರು. ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನದಿಂದ ದೂರ ಇರಲು ಸಾಧ್ಯವಿಲ್ಲ . ಆದರೂ ಇದಕ್ಕೆ ಒಂದು ಸ್ವಯಂ ನಿಯಂತ್ರಣ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಮಕ್ಕಳಲ್ಲಿ ಡೋಪಮಿನ್ ಗ್ರಂಥಿರಸ ಹೆಚ್ಚು ಸಂಭ್ರಮಪಟ್ಟಾಗ ಉತ್ಪತಿಯಾಗುತ್ತದೆ. ಇದರಿಂದ ಪದೇ ಪದೇ ಮೊಬೈಲ್ ಬಳಕೆಯ ದಾಸರಾಗಿ ಬದಲಾಗುವ ಸಾಧ್ಯತೆ ಕೂಡ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಸಮಾಜದ ಮೇಲೆ ಗುರುತರವಾದ ಜವಾಬ್ದಾರಿ ಇದ್ದು, ಮಕ್ಕಳು ಇದಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಭಿಪ್ರಾಯಪಟ್ಟರು