Tuesday, April 13, 2021

ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಖರ್ಗೆಗೆ ಜೀವ ಬೆದರಿಕೆ

ಬೆಂಗಳೂರು: ನಿನ್ನೆಯಷ್ಟೇ ಕಾಂಗ್ರೆಸ್ ನ ರಾಜ್ಯಸಭಾ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಜೀವ ಬೆದರಿಕೆ ಬಂದಿದೆ ಎಂಬ ಸಂಗತಿಯನ್ನು ಅವರ ಪುತ್ರ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ಗೆ ಮಂಗಳವಾರ (ಜೂನ್ 9) ದೂರು ನೀಡಿರುವ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ್ ಖರ್ಗೆಯವರಿಗೆ ಸೂಕ್ತ ಭದ್ರತೆ ನೀಡಬೇಕು ಹಾಗೂ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಜೂನ್ 7ರಂದು ದೂರವಾಣಿ ಕರೆ ಮಾಡಿದ್ದ ವ್ಯಕ್ತಿ ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾತಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಚುನಾವಣೆಯಿಂದ ಹಿಂದೆ ಸರಿಯುವಂತೆ ತಾಕೀತು ಮಾಡಿದ್ದಾನೆ ಎಂದು ಅವರು ವಿವರಣೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!