ಬೆಂಗಳೂರು: ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಾಗ್ದಾಳಿ ತೀವ್ರಗೊಳಿಸಿದೆ. ಈ ಸಂಬಂಧ ಟ್ವಿಟರ್ ನಲ್ಲಿ ಪ್ರಶ್ನೆಗಳ ಸುರಿಮಳೆ ಗೈದಿದೆ. ನಾಲ್ಕು ಪ್ರಶ್ನೆಗಳನ್ನು ಎತ್ತಲಾಗಿದ್ದು, ಮಂಗಳೂರು ಗೋಲಿಬಾರ್, ಇತಿಹಾಸ ಕಾರ ರಾಮಚಂದ್ರ ಗುಹಾ ಅವಮಾನ ಪ್ರಕರಣ, ಜ್ಯೋತಿ ನಿವಾಸ ಕಾಲೇಜು ಘಟನೆ ಮತ್ತು ಶಾಸಕ ವಿಶ್ವನಾಥ್ ಕಲಾ ಸಂಸ್ಥೆಗೆ ನುಗ್ಗಿದ ಪ್ರಕರಣ ಪ್ರಸ್ತಾಪಿಸಿದೆ. ಇದು ಗುಜರಾತ್ ಮಾದರಿಯೇ ಎಂದು ಅಮಿತ್ ಶಾ ಅವರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.