Thursday, August 18, 2022

ಬಿಜೆಪಿಯಲ್ಲಿ ತಳಮಳಕ್ಕೆ ಕಾರಣವಾಗಿರುವ ಕಾಂಗ್ರೆಸ್ ಆಂತರಿಕ ಸಮೀಕ್ಷೆ

Follow Us

newsics.com

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೇವಲ 9 ತಿಂಗಳು ಬಾಕಿ ಇರುವಂತೆಯೇ ಕಾಂಗ್ರೆಸ್ ಘಟಕ ನಡೆಸಿರುವ ಆಂತರಿಕ ಸಮೀಕ್ಷೆಯ ಫಲಿತಾಂಶವನ್ನು ಬಿಜೆಪಿ  ತಳ್ಳಿಹಾಕಿದೆ. ನಿರ್ಲಕ್ಷಿಸುವ ಪ್ರಯತ್ನ ನಡೆಸಿದೆ.

ಆದರೆ ನಿಜವಾದ ಬೆಳವಣಿಗೆ ಬೇರೆಯೇ ಆಗಿದೆ. ರಾಜ್ಯ ಬಿಜೆಪಿಯಲ್ಲಿ ಈ ಸಮೀಕ್ಷೆ ಸಣ್ಣ ಮಟ್ಟಿನ ಕಂಪನ ಸೃಷ್ಟಿಸಿದೆ.

ಬಿಜೆಪಿಯ ಜನಪ್ರಿಯತೆ ತಳಮಟ್ಟದಲ್ಲಿ ರಾಜ್ಯದಲ್ಲಿ ಕುಸಿಯುತ್ತಿದೆಯೇ ಎಂಬ ಆತಂಕ ಪಕ್ಷವನ್ನು ಕಾಡುತ್ತಿದೆ. ಪಂಚಮಸಾಲಿ ಮೀಸಲಾತಿ ವಿವಾದ, ಕಮಿಷನ್ ಆರೋಪ, ಸ್ವಜನ ಪಕ್ಷ ಪಾತ ಮತ್ತು ಯಡಿಯೂರಪ್ಪ  ಅವರ ಕಡೆಗಣನೆ ಹೀಗೆ ಹತ್ತು ಹಲವು ಅಂಶಗಳು ಬಿಜೆಪಿ ಸಾಧನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ   ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಸಮೀಕ್ಷೆಯಲ್ಲಿ ಕೈ ಪಾಳಯಕ್ಕೆ 120 ಮತ್ತು ಬಿಜೆಪಿಗೆ 70 ಕ್ಷೇತ್ರ ದೊರೆಯುವ ಸಾಧ್ಯತೆ ಇದೆ ಎಂದು ವ್ಯಕ್ತವಾಗಿದೆ.

ಇದು ಬಿಜೆಪಿಯ ತಳಮಳಕ್ಕೆ ಕಾರಣವಾಗಿದೆ. ಬಿಜೆಪಿ ನಡೆಸಿರುವ ಸಮೀಕ್ಷೆ ಕೂಡ ಹಲವು ಕ್ಷೇತ್ರಗಳಲ್ಲಿ ಅದರಲ್ಲಿ ಮುಖ್ಯವಾಗಿ ಮೊದಲ ಬಾರಿ ಆಯ್ಕೆಯಾಗಿರುವ ಕ್ಷೇತ್ರಗಳಲ್ಲಿ ಅಪಾಯದ ಮುನ್ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ

ಮಹಾರಾಷ್ಟ್ರದಲ್ಲಿ ಶಿಂಧೆಗೆ ಮೊದಲ ಜಯ: ರಾಹುಲ್ ನರ್ವೆಕರ್ ನೂತನ ಸ್ಪೀಕರ್

ಮತ್ತಷ್ಟು ಸುದ್ದಿಗಳು

vertical

Latest News

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...
- Advertisement -
error: Content is protected !!