newsics.com
ಬೆಂಗಳೂರು: ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆಯಾಗಿದೆ.
ರವಿ ಅಲಿಯಾಸ್ ಮತ್ತಿರವಿ (42) ಕೊಲೆಯಾದ ಕಾರ್ಯಕರ್ತ. ಲಗ್ಗೆರೆ ಬಳಿಯ ಚೌಡೇಶ್ವರಿ ನಗರದಲ್ಲಿ ಬುಧವಾರ ರಾತ್ರಿ 11 ಗಂಟೆಗೆ ಈ ಕೊಲೆ ನಡೆದಿದೆ. ಬೈಕ್‌ಗಳಲ್ಲಿ ಬಂದ ಐವರು ರವಿಯನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಟೆಂಪೋ ಟ್ರಾವೆಲ್ಲರ್ ಚಾಲಕ ಹಾಗೂ ಮೇಕೆ ಸಾಕಾಣಿಕೆ ಮಾಡುತ್ತಿದ್ದ ರವಿ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಆ ಬಳಿಕ ಸಿಎಂಎಚ್ ಬಾರ್‌ನಲ್ಲಿ ಮದ್ಯ ಸೇವನೆ ಮಾಡಿ, ಅಲ್ಲಿಂದ ತಾವು ವಾಸವಾಗಿದ್ದ ಏರಿಯಾದ ಕೃಷ್ಣಮೂರ್ತಿ ಎಂಬ ಮತ್ತೋರ್ವ ಕಾಂಗ್ರೆಸ್ ಮುಖಂಡನ ಜನ್ಮದಿನದ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಪಾರ್ಟಿ ಮುಗಿಸಿದ ಬಳಿಕ ರವಿ ಮನೆಗೆ ತೆರಳುತ್ತಿದ್ದಾಗ ಕಾದು ಕುಳಿತಿದ್ದ ಹಂತಕರು ಬೈಕ್‌ಗಳಲ್ಲಿ ಆತನನ್ನು ಹಿಂಬಾಲಿಸಿ ಬಂದು ರಸ್ತೆ ಮಧ್ಯೆಯೆ ಜಗಳ ತೆಗೆದು ಕಾದಾಟಕ್ಕಿಳಿದಿದ್ದಾರೆ. ಓಡಲು ಮುಂದಾದ ರವಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಕೊನೆಗೆ ಹಳ್ಳಿರುಚಿ ಹೋಟೆಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಗೆ ಹೊಡೆದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್: ಐಸಿಯುನಲ್ಲಿ ಚಿಕಿತ್ಸೆ