ಬೆಂಗಳೂರು: ನಗರದಲ್ಲಿ ಈಗ ಕಂಟೈನ್ಮೆಂಟ್ ಝೋನ್’ಗಳದೇ ದರಬಾರು. ಬೆಂಗಳೂರು ನಗರದಲ್ಲಿ 11,638ಕ್ಕೂ ಕಂಟೈನ್ಮೆಂಟ್ ಝೋನ್’ಗಳಿದ್ದು, ಬೆಂಗಳೂರು ದಕ್ಷಿಣದಲ್ಲೇ ಹೆಚ್ಚು ಕಂಟೈನ್ಮೆಂಟ್ ಝೋನ್ಗಳಿವೆ.
ಬೆಂಗಳೂರು ನಗರದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, 11,638ಕ್ಕೂ ಝೋನ್ಗಳಿದ್ದು, ಇವುಗಳಲ್ಲಿ 9,815 ಸಕ್ರಿಯ ಝೋನ್ ಆಗಿವೆ.
ನಗರದ ದಕ್ಷಿಣದಲ್ಲಿ 3000ಕ್ಕೂ ಕಂಟೈನ್ಮೆಂಟ್ ಝೋನ್ಗಳಿವೆ. ಉಳಿದಂತೆ ಪೂರ್ವ, ಪಶ್ಚಿಮ ಮತ್ತು ಬೊಮ್ಮನಹಳ್ಳಿ ವಲಯಗಳಿವೆ. ಬೆಂಗಳೂರು ದಕ್ಷಿಣದಲ್ಲಿಯೇ ಶೇ.27ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ಪೂರ್ವದಲ್ಲಿ ಶೇ.24, ಪಶ್ಚಿಮದಲ್ಲಿ ಶೇ.19ರಷ್ಟು ಪ್ರಕರಣಗಳು ವರದಿಯಾಗಿವೆ. ಕಳೆದ 10 ದಿನಗಳಲ್ಲಿ ಶೇ.26ರಷ್ಟು ಹೊಸ ಪ್ರಕರಣಗಳು ಬೆಂಗಳೂರು ದಕ್ಷಿಣದಲ್ಲಿಯೇ ದಾಖಲಾಗಿದೆ. ಶಾರದಾ ನಗರ ವಾರ್ಡ್ ಬಿಬಿಎಂಪಿಗೆ ತಲೆನೋವು ತಂದಿದೆ. ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳ ಪೈಕಿ 160 ವಾರ್ಡ್ಗಳಲ್ಲಿ 50ಕ್ಕೂ ಅಧಿಕ ಸಕ್ರಿಯ ಕೊರೋನಾ ಪ್ರಕರಣಗಳಿವೆ.
ಬೆಂಗಳೂರಲ್ಲಿ ಕಂಟೈನ್ಮೆಂಟ್ ಝೋನ್’ಗಳದೇ ದರಬಾರು!
Follow Us