newsics.com
ಕಲಬುರಗಿ: ಕಳೆದೊಂದು ವಾರದಿಂದ ಭೂಕಂಪನವಾಗುತ್ತಿರುವ ಕಲಬುರಗಿಯಲ್ಲಿ ಮಂಗಳವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ವೇಳೆಯೂ ಭೂಕಂಪನದ ಅನುಭವವಾಗಿದೆ.
ಸತತ ಭೂಕಂಪನದಿಂದ ಕಂಗಾಲಾಗಿರುವ ಕಲಬುರಗಿ ಜಿಲ್ಲೆಯ ಹಲವು ಹಳ್ಳಿಗಳ ಜನ ಊರು ತೊರೆಯುತ್ತಿದ್ದಾರೆ. ಭಯಭೀತರಾದ ಜನ ರಾತ್ರಿ ಮನೆಯ ಹೊರಗಡೆಯೇ ಮಲಗಿ ದಿನ ಕಳೆಯುತ್ತಿದ್ದಾರೆ.
ಭೂಕಂಪನ ಕುರಿತಂತೆ ವರದಿ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಸಿದ್ದರಾಮಯ್ಯ ಭೂಕಂಪಪೀಡಿತ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಸಿದ್ದರಾಮಯ್ಯ ಸಭೆ ನಡೆಸುವಾಗಲೇ ಭೂಮಿ ಕಂಪಿಸಿದ್ದು ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗಡಿಕೇಶ್ವರ, ಹೊಸಳ್ಳಿ ಎಚ್, ತೇಗಲತಿಪ್ಪಿ, ಕೆರೂರು ಸೇರಿದಂತೆ 10 ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಲಘು ಭೂಕಂಪನದ ಅನುಭವವಾಗುತ್ತಿದೆ. ಸೋಮವಾರ ಸಹ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಕಂಪನ ದಾಖಲಾಗಿತ್ತು.