newsics.com
ಬಳ್ಳಾರಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಸಪೇಟೆ ತಾಲ್ಲೂಕಿನ ಹಂಪಿ ‘ಎದುರು ಬಸವಣ್ಣ’ ಮಂಟಪದ ಕಲ್ಲುಗಳು ಭಾನುವಾರ ಕುಸಿದುಬಿದ್ದಿವೆ.
ಮಳೆ ನೀರಿಗೆ ಗೋಡೆ ನೆನೆದು ಮಂಟಪದ ಕಲ್ಲುಗಳು ಬಿದ್ದಿರುವ ಸಾಧ್ಯತೆ ಇದೆ. ಈ ಹಿಂದೆಯೂ ಈ ಮಂಟಪದ ಕಲ್ಲುಗಳು ಬಿದ್ದಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಜಿಟಿಜಿಟಿ ಮಳೆ ಭಾನುವಾರ ದಿನವಿಡೀ ಸುರಿದಿದೆ. ಸತತ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ.
ಸತತ ಮಳೆ; ಹಂಪಿಯ ಬಸವಣ್ಣ ಮಂಟಪದ ಕಲ್ಲು ಕುಸಿತ
Follow Us