newsics.com
ಮಡಿಕೇರಿ: ಮಡಿಕೇರಿಯಲ್ಲಿ ಮೊದಲ ಬಾರಿಗೆ ಕೂರ್ಗ್ ಕಾಫಿ ಉತ್ಸವವನ್ನು ಏರ್ಪಡಿಸಲಾಗಿದೆ.
ರಾಜಾಸೀಟ್ ಉದ್ಯಾನದಲ್ಲಿ ಡಿ. 10 ಹಾಗೂ 11ರಂದು ಕೊಡಗು ಜಿಲ್ಲಾಡಳಿತ, ಕಾಫಿ ಮಂಡಳಿ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಖಾಸಗಿ ಸಂಸ್ಥೆಗಳು ಕಾಫಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ತಿಳಿಸಿದರು.
ಕೊಡಗಿನ ಕಾಫಿ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಆಯೋಜಿಸಿರುವ ಈ ಉತ್ಸವದಲ್ಲಿ ಎಲ್ಲ ಕಾಫಿ ಪಾಲುದಾರರನ್ನು ಒಂದೇ ಸೂರಿನಡಿ ತರಲಾಗುವುದು. ಅತ್ಯುತ್ತಮ ಕಾಫಿ ಬ್ರಾಂಡ್ ಗಳು, ಸ್ವಸಹಾಯ ಗುಂಪುಗಳ ಕಾಫಿ ಉತ್ಪನ್ನಗಳು, ಬ್ರೂಯಿಂಗ್ ಯಂತ್ರೋಪಕರಣಗಳು ಪ್ರದರ್ಶನದಲ್ಲಿ ಇರಲಿವೆ.
ದೆಹಲಿ ಪಾಲಿಕೆ ಚುನಾವಣೆ: ಸಮೀಕ್ಷೆಯಲ್ಲಿ ಬಿಜೆಪಿಗೆ ಸೋಲು, ಆಪ್ಗೆ ಅಧಿಕಾರ!