Sunday, July 3, 2022

ಕೊರೋನಾ ಎಫೆಕ್ಟ್; ಈ ಬಾರಿ ಆನ್ಲೈನ್’ನಲ್ಲಿ ಮಾತ್ರ ಇಸ್ಕಾನ್ ಕೃಷ್ಣದರ್ಶನ

Follow Us

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಜನರಿಗೆ ನೆನಪಾಗೋದು ಇಸ್ಕಾನ್. ಆದರೆ ಈ ಬಾರಿ ಇಸ್ಕಾನ್ ನಲ್ಲಿ ಅದ್ದೂರಿ ಜನ್ಮಾಷ್ಟಮಿ ಆಚರಣೆಗೆ ಕೊರೋನಾ ಅಡ್ಡಿಯಾಗಿದ್ದು, ಯೂಟ್ಯೂಬ್, ಪೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಲೈವ್’ನಲ್ಲಿ ಮಾತ್ರ ಕೃಷ್ಣದರ್ಶನವಾಗಲಿದೆ.
ಹೌದು, ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಲಕ್ಷಾಂತರ ಜನರು ಇಸ್ಕಾನ್ ಗೆ ಭೇಟಿ ನೀಡಿ ಪೂಜೆ, ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದರು. ಆದರೆ ಈ ಭಾರಿ ಕೊರೋನಾದಿಂದ ಎಲ್ಲದಕ್ಕೂ ಅಡ್ಡಿ ಉಂಟಾಗಿದ್ದು, ದೇವಾಲಯದ ಆಡಳಿತ ಮಂಡಳಿ ವಿಡಿಯೋ ಕಾನ್ಫರೆನ್ಸ್ ಮ‌ೂಲಕ ಪೂಜೆ ಲೈವ್ ತೋರಿಸಲಿದೆ.
ಇದಕ್ಕಾಗಿ ಇಸ್ಕಾನ್ ವರ್ಚುವಲ್ ಕೃಷ್ಣಜನ್ಮಾಷ್ಟಮಿ 2020 ಆಯೋಜಿಸಿದ್ದು, ಬರೋಬ್ಬರಿ 40 ಗಂಟೆಗಳ ಕಾಲ ಸ್ವಾಗತಂ ಕೃಷ್ಣ ಲೈವ್ ವಿಡಿಯೋ ಮೂಲಕ, ಹರೇ ರಾಮಾ ಹರೇ ಕೃಷ್ಣ ಮಂತ್ರಪಠಣಕ್ಕೆ ಸಿದ್ಧತೆ ನಡೆಸಿದೆ.

ಭಾರತ, ಚೀನಾಕ್ಕೆ ಹೋಗಬೇಡಿ….! ಪ್ರಜೆಗಳಿಗೆ ಅಮೆರಿಕ ತಾಕೀತು…

ಬೆಳಗ್ಗೆ 6.30 ರಿಂದ‌ ಇಸ್ಕಾನ್ ಯೂಟ್ಯೂಬ್, ಫೆಸ್ ಬುಕ್, ಇನ್’ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ ಕೃಷ್ಣನ‌ ಭಜನೆ, ಅಭಿಷೇಕ, ಪೂಜೆ, ಪ್ರಾರ್ಥನೆ ನೆರವೇರಲಿದೆ. ಜನ್ಮಾಷ್ಟಮಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸರ್ಕಾರದ ಗೈಡೆನ್ಸ್ ಪ್ರಕಾರ ನಡೆಯಲಿದ್ದು, ಇವುಗಳನ್ನು ಅನ್’ಲೈನ್’ನಲ್ಲಿ ಪ್ರಸಾರ‌ ಮಾಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಜನರು ಇಸ್ಕಾನ್ ಭೇಟಿ ನೀಡಬಾರದು. ಮನೆಯಲ್ಲೇ ಕುಳಿತು ಸೋಷಿಯಲ್‌ ಮೀಡಿಯಾದಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ಪುನೀತರಾಗಿ ಎಂದು ಮನವಿ ‌ಮಾಡಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!