ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೂ ಈಗ ಕೊರೋನಾ ಬಿಸಿ ತಟ್ಟಿದೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ 59 ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ. ಈ ಪೈಕಿ 52 ಮಂದಿ ಕೈದಿಗಳಾದರೆ, ಇನ್ನುಳಿದವರು ಜೈಲಿನ ಸಿಬ್ಬಂದಿಯಾಗಿದ್ದಾರೆ. ಕೊರೋನಾ ಸೋಂಕಿತರ ಪೈಕಿ ವಿಚಾರಣಾಧೀನಾ ಕೈದಿಗಳೇ ಹೆಚ್ಚಿದ್ದಾರೆ.
ಮೊದಲ ಬಾರಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ವರದಿ ಬಂದಿತ್ತು. ಆದರೆ ಎರಡನೇ ಬಾರಿಯ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾಗೆ ಸ್ವಾಮೀಜಿ ಬಲಿ
150 ಕೈದಿಗಳ ಪೈಕಿ 32 ಮಂದಿಗೆ ಪಾಸಿಟಿವ್ ಬಂದಿದೆ. ಇನ್ನೂ ಹಲವು ಕೈದಿಗಳ ಕೊರೋನಾ ರಿಪೋರ್ಟ್ ಬರಬೇಕಿದೆ. ಜೈಲಿನಲ್ಲಿರುವ ಮಹಿಳಾ ಕೈದಿಗೂ ಕೊರೋನಾ ಪತ್ತೆಯಾಗಿರುವುದು ವಿಶೇಷ. ಹೀಗಾಗಿ ಜೈಲಿನಾಧಿಕಾರಿಗಳಿಗೆ ಕೊರೋನಾ ಭೀತಿ ಶುರುವಾಗಿದೆ.
ಮಹಾರಾಷ್ಟ್ರದ ಮೂರು ಜೈಲುಗಳಲ್ಲಿ 596 ಕೈದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನಾಗಪುರದಲ್ಲಿ 200 ಮಂದಿ ಕೈದಿಗಳು ಮತ್ತು 57 ಸಿಬ್ಬಂದಿಗೆ ಸೋಂಕು ತಗುಲಿದೆ. ದೆಹಲಿಯ ತಿಹಾರ್ ಜೈಲಿನಲ್ಲೂ 137 ಪಾಸಿಟಿವ್ ಕೇಸ್ ಪತ್ತೆಯಾಗಿವೆ.