ಬೆಂಗಳೂರು: ಈಗಾಗಲೇ ಸಹೋದರನ ಸಾವಿನಿಂದ ನೊಂದಿರುವ ಧ್ರುವ ಸರ್ಜಾಗೆ ಇನ್ನೊಂದು ಶಾಕ್ ಎದುರಾಗಿದ್ದು, ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೋನಾ ಸೋಂಕು ತಗುಲಿದೆ.
ಸ್ವತಃ ನಟ ಧ್ರುವ ಸರ್ಜಾ ಈ ವಿಚಾರವನ್ನು ತಮ್ಮ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.
ನನಗೆ ಹಾಗೂ ನನ್ನ ಪತ್ನಿ ಪ್ರೇರಣಾಗೆ ಕೋವಿಡ್-19 ಪಾಸಿಟಿವ್ ಆಗಿದೆ. ನಾವು ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ-ಹಾರೈಕೆಯಿಂದ ನಾವು ಆದಷ್ಟು ಬೇಗ ಹುಶಾರಾಗಿ ಬರುತ್ತೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಕಳೆದ ಕೆಲ ದಿನಗಳಿಂದ ನಮ್ಮ ಸಂಪರ್ಕದಲ್ಲಿದ್ದವರೆಲ್ಲ ಒಮ್ಮೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಧ್ರುವ ಸರ್ಜಾ ಸಲಹೆ ನೀಡಿದ್ದಾರೆ.
ಎಂಟಿಆರ್’ನ 30 ಸಿಬ್ಬಂದಿಗೆ ಸೋಂಕು, 40 ಮಂದಿ ಕ್ವಾರಂಟೈನ್