newsics.com
ಬೆಂಗಳೂರು: ನೀವು ಮೆಟ್ರೋ ಪ್ರಯಾಣಿಕರಾಗಿದ್ದರೆ ಇನ್ನಷ್ಟು ಜಾಗರೂಕರಾಗುವ ಅಗತ್ಯವಿದೆ. ನಮ್ಮ ಮೆಟ್ರೋದ 28 ಲೋಕೋ ಪೈಲಟ್‌ಗಳು ಹಾಗೂ ಸ್ಟೇಷನ್ ಕಂಟ್ರೋಲರ್‌ಗಳಿಗೆ ಕೊರೋನಾ ಸೋಂಕು ತಗುಲಿದೆ. ಆರು ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ತಗುಲಿದೆ.
ಕೊರೋನಾ ಲಾಕ್‌ಡೌನ್ ಸಡಿಲಗೊಂಡ ಬಳಿಕ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿರುವ ಈ ಹೊತ್ತಿನಲ್ಲಿ, ಲೋಕೋ ಪೈಲಟ್‌ಗಳಿಗೆ ಸೋಂಕು ತಗುಲಿರುವುದು ಪ್ರಯಾಣಿಕರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ. ಸೆ.7 ರಿಂದ ನಮ್ಮ ಮೆಟ್ರೋ ಸಂಚಾರ ಆರಂಭಗೊಂಡಿತ್ತು. ಈ ಎಲ್ಲಾ ಪೈಲಟ್‌ಗಳಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ಕೆಲವರನ್ನು ಹೋಮ್ ಕ್ವಾರಂಟೈನ್’ನಲ್ಲಿರಿಸಲಾಗಿದೆ. ಇನ್ನೂ ಕೆಲವರು ಆಸ್ಪತ್ರೆಯಲ್ಲಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ 23 ದಿನದಲ್ಲಿ 6,92,269 ಮಂದಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಮಾರ್ಚ್ 22ಕ್ಕೂ ಮೊದಲು ಪ್ರತಿನಿತ್ಯ 5.1 ಲಕ್ಷ ಮಂದಿ ಸಂಚರಿಸುತ್ತಿದ್ದರು.