newsics.com
ಬೆಳಗಾವಿ: ಕೊರೋನಾ ಲಾಕ್ ಡೌನ್ ಸಂಕಷ್ಟದಿಂದ ಹೊರಬರಲಾರದೆ ಇಲ್ಲಿನ ವಡಗಾವಿಯ ದೇವಾಂಗ ನಗರದಲ್ಲಿ ಯುವ ನೇಕಾರರೊಬ್ಬರು ಮಗ್ಗದ ಬಳಿಯೇ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತೋಷ್ ಶಂಕರ್ ಢಗೆ (35) ಆತ್ಮಹತ್ಯೆಗೆ ಶರಣಾದವರು. ಅವರಿಗೆ ತಂದೆ, ತಾಯಿ, ಪತ್ನಿ ಇದ್ದಾರೆ. ಕೋವಿಡ್-19 ಲಾಕ್ಡೌನ್ ಕಾರಣದಿಂದ ಕೆಲಸವಿಲ್ಲದೆ ಮತ್ತು ಆದಾಯವಿಲ್ಲದೆ ಅವರಿಗೆ ಆರ್ಥಿಕ ಸಂಕಷ್ಟ ಉಂಟಾಗಿತ್ತು. ಇದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಶಹಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.
‘ಮೃತರ ಕುಟುಂಬದವರಿಗೆ 10 ರೂ. ಲಕ್ಷ ಪರಿಹಾರ ನೀಡಬೇಕು. ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನೇಕಾರರ ಸೇವಾ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಕೊರೋನಾ ಸಂಕಷ್ಟ; ಯುವ ನೇಕಾರ ಆತ್ಮಹತ್ಯೆ
Follow Us