newsics.com
ಬೆಂಗಳೂರು: ರಾಜ್ಯದಲ್ಲಿ ಇಂದು(ಫೆ.23) ಹೊಸದಾಗಿ 383 ಜನರಿಗೆ ಕೊರೋನಾ ಸೋಂಕು ತಗುಲಿದೆ. ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 9,48,849ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 12,303 ಕ್ಕೇರಿದೆ.
ಕಳೆದ 24 ಗಂಟೆಯಲ್ಲಿ 378 ಮಂದಿ ಗುಣಮುಖರಾಗಿದ್ದು, ಒಟ್ಟಾರೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9,30,465ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,062ಕ್ಕೆ ತಲುಪಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 948849 ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟಾರೆ 6062 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 12303 ಜನರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರೆ, 122 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಸೋಂಕು ಇಳಿಕೆಯತ್ತ ಸಾಗಿದ್ದು, ಕಳೆದ 24 ಗಂಟೆಗಳಲ್ಲಿ 240 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು 240 ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 404183 ಕ್ಕೆ ಏರಿದೆ. ಇದುವರೆಗೂ 395344 ಜನರು ಗುಣಮುಖರಾಗಿದ್ದಾರೆ. 4380 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಬೆಂಗಳೂರಿನಲ್ಲಿ 4458 ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತಿಳಿಸಿದೆ.
ಬಾಗಲಕೋಟೆಯಲ್ಲಿ 00, ಬಳ್ಳಾರಿ 5, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 04, ಬೀದರ್ 01, ಚಾಮರಾಜನಗರ 00, ಚಿಕ್ಕಬಳ್ಳಾಪುರ 01, ಚಿಕ್ಕಮಗಳೂರು 02, ಚಿತ್ರದುರ್ಗ 03, ದಕ್ಷಿಣ ಕನ್ನಡ 17, ದಾವಣಗೆರೆ 00, ಧಾರವಾಡ 03, ಗದಗದಲ್ಲಿ 00 ಹಾಸನದಲ್ಲಿ0 9, ಹಾವೇರಿ 01, ಕಲಬುರಗಿ 08, ಕೊಡಗು 03, ಕೋಲಾರ 01, ಕೊಪ್ಪಳ 00, ಮಂಡ್ಯ 02, ಮೈಸೂರು 26, ರಾಯಚೂರು 00, ರಾಮನಗರ 02, ಶಿವಮೊಗ್ಗ 18, ತುಮಕೂರು 12, ಉಡುಪಿ 12, ಉತ್ತರ ಕನ್ನಡ 00, ವಿಜಯಪುರ 01, ಹಾಗೂ ಯಾದಗಿರಿಯಲ್ಲಿ 02 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೋನಾ ಆತಂಕ; ಕಲಿತದ್ದನ್ನೇ ಮರೆಯುತ್ತಿರುವ ಮಕ್ಕಳು!
ಕೊರೋನಾ: ಮಕ್ಕಳು ಖಿನ್ನತೆಯತ್ತ ಜಾರುತ್ತಿರುವರೇ?
ಕೇರಳದಲ್ಲಿ 4034, ಮಹಾರಾಷ್ಟ್ರದಲ್ಲಿ 6218 ಕೊರೋನಾ ಪ್ರಕರಣ
ಒಂದೇ ದಿನ 10584 ಮಂದಿಗೆ ಕೊರೋನಾ ಸೋಂಕು 78ಜನರ ಸಾವು