ಕಾರವಾರ: ಕೊರೊನಾ ವೈರಸ್ ಜಪಾನಿಗೂ ಕಾಲಿಟ್ಟಿದೆ. ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿದ್ದ ಸುಮಾರು 60 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ಹಡಗಿನಲ್ಲಿ ಕಾರ್ಯನಿರ್ವಹಿಸುವ ಕಾರವಾರದ ಅಭಿಷೇಕ್ ಮಗರ್ ಎಂಬುವರಿಗೂ ಕೊರೊನಾ ಸೋಂಕು ತಗುಲಿದೆ.
ಇದರಿಂದ ಅಭೀಷೇಕ್ ಮಗರ್ ಪೋಷಕರು ಆತಂಕಗೊಂಡಿದ್ದು, ಮಗನ ಬರುವಿಕೆಗೆ ಕಾಯುತ್ತಿದ್ದಾರೆ. ಮಗನನ್ನು ರಕ್ಷಿಸಿ ಕರೆತರುವಂತೆ ಅವರ ತಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಈ ಹಡಗು ಚೀನಾದ ಹಾಂಕಾಂಕ್ನಿಂದ ಜಪಾನ್ನ ಟೋಕಿಯೋಗೆ ತೆರಳುತ್ತಿತ್ತು. ಸದ್ಯ ಯಾಕೋಹಾಮಾ ಬಂದರಿನಲ್ಲಿ ಈ ಹಡಗನ್ನು ನಿಲ್ಲಿಸಲಾಗಿದೆ.
ಜಪಾನ್ ಹಡಗಿನ ಸಿಬ್ಬಂದಿ ಕಾರವಾರ ಯುವಕನಿಗೂ ಕೊರೊನಾ ಸೋಂಕು
Follow Us