newsics.com
ಬೆಂಗಳೂರು: ನಮ್ಮ ಮೆಟ್ರೋ ಮತ್ತು ಬಿಎಂಟಿಸಿಯ 250 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಎರಡೂ ನಿಗಮಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.
ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 163 ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನಮ್ಮ ಮೆಟ್ರೋ ನಿಗಮದ 87 ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾಸಿಟಿವ್ ಆದ ಸಿಬ್ಬಂದಿಗೆ ಹೋಂ ಐಸೊಲೇಷನ್ನಲ್ಲಿರಲು ಸೂಚಿಸಲಾಗಿದೆ. ಎಲ್ಲ ಬಸ್, ಮೆಟ್ರೋ ನಿಲ್ದಾಣಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಸಾರಿಗೆ ಸಂಸ್ಥೆಯ ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್, ಸೆಕ್ಯೂರಿಟಿ ಗಾರ್ಡ್, ಅಧಿಕಾರಿಗಳು ಸೇರಿ 30 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಎಂ ಮನೆ ಭದ್ರತೆಯಲ್ಲಿದ್ದ ಪೊಲೀಸರಿಂದಲೇ ಡ್ರಗ್ ಡೀಲ್: ಇಬ್ಬರು ಕಾನ್ಸ್ಟೆಬಲ್ಗಳ ಬಂಧನ
ರೈಲಲ್ಲಿ ಹಸಿವಿನಿಂದ ಅತ್ತ ಮಗು, ಸಚಿವರಿಗೆ ತಾಯಿಯ ಟ್ವೀಟ್, 23 ನಿಮಿಷದಲ್ಲೇ ಸಿಕ್ತು ಹಾಲು!
ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗೆ ಬಿಜೆಪಿ ನಾಯಕರ, ಉದ್ಯಮಿಗಳ ಅಸಮಾಧಾನ