Tuesday, April 13, 2021

ಕರ್ಣಾಟಕ ಬ್ಯಾಂಕ್‍ನಿಂದ ಕೊರೋನಾ ವಿಮೆ

ಬೆಂಗಳೂರು: ಕರ್ಣಾಟಕ ಬ್ಯಾಂಕ್ ಸಾರ್ವಜನಿಕರಿಗಾಗಿ ಕೊರೋನಾ ವಿಮಾ ಯೋಜನೆ ಜಾರಿಗೊಳಿಸಿದೆ. ಕೊರೋನಾ ಸೋಂಕಿನಿಂದ ಪೀಡಿತರಾದವರಿಗೆ ಅವರ ಸಂಕಷ್ಟದ ಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ‘ಯುನಿವರ್ಸಲ್ ಸೋಂಪೊ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್’ ಇವರ ಸಹಯೋಗದೊಂದಿಗೆ ಆಸ್ಪತ್ರೆಯ ವೆಚ್ಚಗಳಿಗಾಗಿ ಕೇವಲ ರೂ. 399 (ಎಲ್ಲ ತೆರಿಗೆಗಳೂ ಸೇರಿ) ವಿಮಾ ಕಂತನ್ನು ನೀಡುವುದರ ಮೂಲಕ ಈ ವಿಮೆಯನ್ನು ಪಡೆಯಬಹುದಾಗಿದೆ ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ. ಎಸ್. ತಿಳಿಸಿದ್ದಾರೆ. ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಉಂಟಾದಲ್ಲಿ ವಿಮಾದಾರರಿಗೆ ರೂ. 3 ಲಕ್ಷಗಳವರೆಗೆ ಆಸ್ಪತ್ರೆಯ ಖರ್ಚನ್ನು ಹಾಗೂ ಹೊರರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ರೂ. 3,000 ವರೆಗಿನ ಔಷಧಗಳ ಖರ್ಚನ್ನು ಅಥವಾ 14 ದಿನಗಳ ಕ್ವಾರಂಟೈನ್‍ಗೆ ಒಳಪಟ್ಟಲ್ಲಿ ದಿನವೊಂದಕ್ಕೆ ರೂ. 1000 ವರೆಗೆ ಸರ್ಕಾರಿ / ಮಿಲಿಟರಿ ಆಸ್ಪತ್ರೆಗಳ ಕ್ವಾರಂಟೈನ್ ವೆಚ್ಚವನ್ನು ಭರಿಸಲು ಅವಕಾಶವಿದೆ. ಆರಂಭದಲ್ಲಿ ವಿಮೆಯ ಅವಧಿ 120 ದಿನಗಳು. ಈ ವಿಮೆಯ ಸೌಲಭ್ಯ 18 ರಿಂದ 65 ವಯಸ್ಸಿನ ವಯೋಮಿತಿಯ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರಲ್ಲದವರೂ, ಗ್ರಾಹಕರಾಗಿ ವಿಮಾಕಂತನ್ನು ಪಾವತಿಸಿ ವಿಮೆಯನ್ನು ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ. ಸಮೂಹ ವಿಮೆಯ ಸೌಲಭ್ಯವೂ ಇದ್ದು, ಹತ್ತಿರದ ಕರ್ಣಾಟಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!