ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಕೊರೋನಾ ಆತಂಕ ಶುರುವಾಗಿದೆ.
ಚಿಕ್ಕಬಳ್ಳಾಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಮತ್ತು ಅವರ ಪತ್ನಿ, ಮಗ, ಭಾಮೈದನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಸೋಂಕು ಇರುವುದು ಗೊತ್ತಾಗುವ ಮುನ್ನ ಎರಡ್ಮೂರು ದಿನಗಳ ಹಿಂದೆ ಜಿಲ್ಲಾಧ್ಯಕ್ಷರು ದೇವೇಗೌಡರನ್ನು ಭೇಟಿಯಾಗಿದ್ದರು.
ಕೊರೋನಾ ಸೋಂಕಿತ ಜಿಲ್ಲಾಧ್ಯಕ್ಷರ ಕುಟುಂಬ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಾಸ್ಕ್ ಇಲ್ಲದೇ ಖುದ್ದು ಅಧ್ಯಕ್ಷ ಸ್ಥಾನ ನೇಮಕಾತಿ ಪತ್ರವನ್ನು ಇವರಿಗೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದರು. ಹಾಗಾಗಿ ಅವರಿಗೂ ಕ್ವಾರಂಟೈನ್ ಭೀತಿ ಕಾಡುತ್ತಿದೆ ಎನ್ನಲಾಗಿದೆ.