newsics.com
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಮೂರನೆ ಅಲೆ ಆರಂಭದ ಭೀತಿ ಎದುರಾಗಿದೆ. ಪ್ರತಿ ದಿನ 50 – 60 ಸೋಂಕು ಪ್ರಕರಣ ಮಕ್ಕಳಲ್ಲಿ ವರದಿಯಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ 400 ಮಕ್ಕಳಲ್ಲಿ ಸೋಂಕಿನ ಲಕ್ಷಣ ದೃಢಪಟ್ಟಿದೆ. ಇದು ಕೊರೋನಾ ಮೂರನೆ ಅಲೆ ಆರಂಭದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ವರದಿಯಾಗಿರುವ ಒಟ್ಟು ಕೊರೋನಾದಲ್ಲಿ ಶೇಕಡ 12 ಮಕ್ಕಳಾಗಿದ್ದಾರೆ ಎಂದು ವರದಿಯಾಗಿದೆ.
ಈ ಮಧ್ಯೆ ಕೊರೋನಾ ಮೂರನೆ ಅಲೆ ತಡೆ ಎದುರಿಸುವ ಸಂಬಂಧ ಬಿಬಿಎಂಪಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.