ಬೆಂಗಳೂರು: ಚೀನಾದಲ್ಲಿನ ಮಹಾ ಮಾರಿ ಕೊರೋನಾ ವೈರಸ್ ಕೇರಳಕ್ಕೆ ಕಾಲಿಟ್ಟಿರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಮುಖ್ಯವಾಗಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗರಿಷ್ಟ ಮುನ್ನೆಚ್ಚರಿಕೆ ವಹಿಸಲಾಗಿದೆ. ಚೀನಾದಿಂದ ಬಂದ ಪ್ರವಾಸಿಗರ ಪೈಕಿ ಎಲ್ಲರನ್ನು ತಪಾಸಣೆಗೆ ಗುರಿಪಡಿಸಲಾಗಿದೆ. 24 ಸ್ಯಾಂಪಲ್ ಗಳು ನೆಗೆಟಿವ್ ಎಂದು ಖಚಿತವಾಗಿದೆ. ಈ ಮಧ್ಯೆ ಒರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಈ ವ್ಯಕ್ತಿಯಲ್ಲಿ ರೋಗ ಲಕ್ಷಣ ದೃಢಪಟ್ಟಿಲ್ಲ.