Tuesday, April 13, 2021

ರಾಜ್ಯದಲ್ಲಿ 124 ಪೊಲೀಸರಿಗೆ ಕೊರೋನಾ; 17 ಠಾಣೆ ಕಂಪ್ಲೀಟ್ ಸೀಲ್ ಡೌನ್

ಬೆಂಗಳೂರು: ರಾಜ್ಯಾದ್ಯಂತ ಇದುವರೆಗೆ 124 ಪೊಲೀಸರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ರಾಜ್ಯದ 17 ಪೊಲೀಸ್ ಠಾಣೆಗಳು ಕಂಪ್ಲೀಟ್ ಸೀಲ್ ಡೌನ್ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ರಾಜ್ಯದಲ್ಲಿ ಈವರೆಗೆ 124 ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 60 ಕೊರೋನಾಸೋಂಕಿತ ಪೊಲೀಸರು ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಇನ್ನೂ 64 ಕೊರೋನಾ ಸೋಂಕಿತ ಪೊಲೀಸರು ಗುಣಮುಖರಾಗಬೇಕಿದೆ ಎಂದು ತಿಳಿಸಿದರು.
ಈವರೆಗೆ ಕೊರೋನಾ ಸೋಂಕಿನಿಂದಾಗಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. 2 ಸಾವಿರಕ್ಕಿಂತ ಹೆಚ್ಚು ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ ಎಂದು ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!