Saturday, January 16, 2021

80ಕ್ಕೂ ಹೆಚ್ಚು ‘ನಮ್ಮ ಮೆಟ್ರೋ’ ಸಿಬ್ಬಂದಿಗೆ ಕೊರೋನಾ

ಬೆಂಗಳೂರು: ಬೆಂಗಳೂರಿನಲ್ಲಿ 80ಕ್ಕೂ ಅಧಿಕ ನಮ್ಮ ಮೆಟ್ರೋ ಉದ್ಯೋಗಿಗಳಿಗೆ ಕೊರೋನಾ ಸೋಂಕು ತಗುಲಿದೆ.
ನಮ್ಮ ಮೊಟ್ರೋ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ವಂತ್ ಚೌಹಾಣ್ ಬಿ.ಎಲ್. ಈ ಮಾಹಿತಿ ನೀಡಿದ್ದು, ಈ ಉದ್ಯೋಗಿಗಳು ಎರಡನೇ ಹಂತದ ನಾಗವಾರ-ಗೊಟ್ಟಿಗೆರೆ ಲೇನ್ ಬಳಿಯ ಕ್ಯಾಂಪ್ ನಲ್ಲಿ ತಂಗಿದ್ದರು. ಮಂಗಳವಾರ ಇವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಕೋವಿಡ್ ಪಾಸಿಟಿವ್ ಬಂದಿರುವ ಉದ್ಯೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜೊತೆಗೆ ಮಾರ್ಗಸೂಚಿ ಪ್ರಕಾರ ಪ್ರತ್ಯೇಕವಾಗಿರಿಸಲಾಗಿದೆ. ಉದ್ಯೋಗಿಯೊಬ್ಬರಿಗೆ ಜ್ವರ ಕಾಣಿಸಿಕೊಂಡ ಬಳಿಕ ವಿವಿಧ ರಾಜ್ಯಗಳಿಂದ ಬಂದಿರುವ ಲಾರ್ಸೆನ್ ಆಂಡ್ ಟರ್ಬೋ 200ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ಪರೀಕ್ಷಿಸಲಾಗಿದೆ.
ಕ್ಯಾಂಪ್’ಗಳಲ್ಲಿ ಎಲ್ಲಾ ಸುರಕ್ಷತೆ ಮತ್ತು ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುವುದು ಎಂದು ಯಶ್ವಂತ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ವಾಟ್ಸಾಪ್ ಗೌಪ್ಯತೆ ನೀತಿ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು

newsics.com ನವದೆಹಲಿ: ವಾಟ್ಸಾಪ್ ಹಾಗೂ ಫೇಸ್ಬುಕ್'ನ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹಿಂದೆ...

ಅಮೆರಿಕದಲ್ಲಿ ಪತ್ನಿ, ಮಗಳನ್ನು ಕೊಂದು ಗುಂಡಿಕ್ಕಿಕೊಂಡ ಭಾರತ ಮೂಲದ ವ್ಯಕ್ತಿ

newsics.com ನ್ಯೂಯಾರ್ಕ್: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನ್ಯೂಯಾರ್ಕ್ ಪೊಲೀಸರು ಈ ಮಾಹಿತಿ...

ರಾಜ್ಯದಲ್ಲಿ 708 ಮಂದಿಗೆ ಕೊರೋನಾ ಸೋಂಕು, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಈ...
- Advertisement -
error: Content is protected !!