newsics.com
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಇಂದು ತುಸು ಇಳಿಕೆಯಾಗಿದೆ. ಕಳೆದ 24ಗಂಟೆಗಳಲ್ಲಿ 1,669 ಮಂದಿಗೆ ಸೋಂಕು ದೃಢಪಟ್ಟಿದ್ದು, 22 ಜನ ಕೊರೋನಾ ಸೋಂಕಿರು ಮೃತಪಟ್ಟಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 29,26,401 ಮಂದಿಗೆ ಸೋಂಕು ದೃಢಪಟ್ಟಿದೆ. ಮಾರಕ ಕೊರೋನಾಕ್ಕೆ ಈವರೆಗೆ ಒಟ್ಟು 36,933 ಜನ ಉಸಿರು ಚೆಲ್ಲಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 0.98 ಕ್ಕೆ ತಲುಪಿದೆ.
ಕಳೆದ 24 ಗಂಟೆಯಲ್ಲಿ 1,672 ಮಂದಿ ಸೋಂಕಿತರು ಗುಣಮುಖರಾಗದ್ದು, ಚೇತರಿಸಿಕೊಂಡವರ ಸಂಖ್ಯೆ 28,66, 739ಕ್ಕೆ ತಲುಪಿದೆ.
ಒಟ್ಟು 22,703 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಪ್ರಮಾಣ ಶೇ. 1.31ರಷ್ಟಿದೆ.
ಬೆಂಗಳೂರಿನಲ್ಲಿ ಇಂದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 325 ಮಂದಿಗೆ ಸೋಂಕು ತಗುಲಿದ್ದು, 5 ಜನ ಸಾವನ್ನಪ್ಪಿದ್ದಾರೆ. ಇನ್ನು ದಕ್ಷಿಣ ಕನ್ನಡದಲ್ಲೂ ಸೋಂಕು ಏರಿಕೆಯಾಗಿದ್ದು, 390 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ಉಡುಪಿ 115, ಹಾಸನ 113, ಮೈಸೂರು 106 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ನಟಿ ರಾಧಿಕಾ ಆಪ್ಟೆ ನಗ್ನ ಫೋಟೋ ವೈರಲ್: ಚಿತ್ರರಂಗದಿಂದ ಬಹಿಷ್ಕಾರಕ್ಕೆ ಟ್ವಿಟರ್ ಟ್ರೆಂಡ್