Thursday, June 17, 2021

ರಾಜ್ಯದಲ್ಲಿ 31,531 ಮಂದಿಗೆ ಸೋಂಕು,36,475 ಜನ ಗುಣಮುಖ, 403 ಸಾವು

newsics.com

ಬೆಂಗಳೂರು: ರಾಜ್ಯದಲ್ಲಿ ಇಂದು (ಮೇ 16) 31,531ಮಂದಿಗೆ ಸೋಂಕು ತಗುಲಿದ್ದು, ಬರೋಬ್ಬರಿ 403 ಜನ ಸಾವನ್ನಪ್ಪಿದ್ದಾರೆ. ಇದೇ ಮೊದಲ ಬಾರಿಗೆ ಸೋಂಕಿತರಿಗಿಂತ ಹೆಚ್ಚು ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಆಸ್ಪತ್ರೆಯಿಂದ36,475 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 15,81,457 ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 22,03,462ಕ್ಕೆ ತಲುಪಿದ್ದು, ಸಾವನ್ನಪ್ಪಿದವರ ಸಂಖ್ಯೆ ಒಟ್ಟು 21,837ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಒಟ್ಟ 6,00,147ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 8,344ಮಂದಿಗೆ ಸೋಂಕು ತಗುಲಿದ್ದು,143 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದ ಜಿಲ್ಲೆಗಳ ಪೈಕಿ,
ಬಾಗಲಕೋಟೆ-431, ಬಳ್ಳಾರಿ-1729, ಬೆಳಗಾವಿ-1762 , ಬೆಂಗಳೂರು ಗ್ರಾಮಾಂತರ-1082, ಬೆಂಗಳೂರು ನಗರ-8344, ಬೀದರ್-129, ಚಾಮರಾಜನಗರ-440, ಚಿಕ್ಕಬಳ್ಳಾಪುರ-558, ಚಿಕ್ಕಮಗಳೂರು-963, ಚಿತ್ರದುರ್ಗ-640, ದಕ್ಷಿಣ ಕನ್ನಡ-957, ದಾವಣಗೆರೆ-1155, ಧಾರವಾಡ-937, ಗದಗ-453, ಹಾಸನ-1182, ಹಾವೇರಿ-184, ಕಲಬುರಗಿ-645, ಕೊಡಗು-191, ಕೋಲಾರ-569, ಕೊಪ್ಪಳ-617, ಮಂಡ್ಯ-709, ಮೈಸೂರು-1811, ರಾಯಚೂರು-464, ರಾಮನಗರ-403, ಶಿವಮೊಗ್ಗ-643, ತುಮಕೂರು-2138, ಉಡುಪಿ-745, ಉತ್ತರ ಕನ್ನಡ-1087, ವಿಜಯಪುರ-330, ಯಾದಗಿರಿ-233.

ಮತ್ತಷ್ಟು ಸುದ್ದಿಗಳು

Latest News

ಅರಾವಳಿ ಪರ್ವತ ಭೂಮಿ ಅತಿಕ್ರಮಣ ತೆರವು: ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

newsics.com ನವದೆಹಲಿ: ಅರಾವಳಿ ಪರ್ವತ ವ್ಯಾಪ್ತಿಯ ಭೂ ಪ್ರದೇಶದಲ್ಲಿ ನಿರ್ಮಿಸಲಾಗಿರುವ 10000 ವಸತಿ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಯಾವುದೇ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೂನ್ ಏಳರಂದು...

ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ತಡೆ

newsics.com ಬೆಂಗಳೂರು: ರಾಜ್ಯ ಸರ್ಕಾರ ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ 2020-21 ರ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಸರ್ಕಾರ ಹೇಳಿದ್ದು, ಈ...

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ ಯೋಗೇಶ್ವರ್

newsics.com ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಕೂಡ ರಾಜ್ಯ ಬಿಜೆಪಿ ನಾಯಕರ ಜತೆ ಸಮಾಲೋಚನೆ ಮುಂದುವರಿಸಿದ್ದಾರೆ. ಈ ಮಧ್ಯೆ  ಅರುಣ್...
- Advertisement -
error: Content is protected !!